ಗಂಗಾದಿ ಸಕಲ ತೀರ್ಥಂಗಳಿಗಧಿಕ

ಗಂಗಾದಿ ಸಕಲ ತೀರ್ಥಂಗಳಿಗಧಿಕ

(ರಾಗ: ಆರಭಿ. ಅಟ ತಾಳ) ಗಂಗಾದಿ ಸಕಲ ತೀರ್ಥಂಗಳಿಗಧಿಕ ಶ್ರೀ ಹರಿಯ ನಾಮ ಹಿಂಗದೆ ನೆನೆವರ್ಗೆ ಮಂಗಳ ಫಲವೀವ ಹರಿಯ ನಾಮ ||ಪ|| ಸ್ನಾನ ಜಪಂಗಳ ಸಾಧಿಸದವನಿಗೆ ಹರಿಯ ನಾಮ ಜಗದಾದಿಪುರುಷನ ಪೂಜಿಸದವಗೆ ಹರಿಯ ನಾಮ || ವೇದ ಶಾಸ್ತ್ರಂಗಳನೋದದ ಮನುಜಗೆ ಹರಿಯ ನಾಮ ಸಾಧನಂಗಳ ನಾಲ್ಕು ಸಾಧಿಸದವನಿಗೆ ಹರಿಯ ನಾಮ || ಕಾಲನ ದೂತರ ತರಿದು ಬಿಸುಡುವುದು ಹರಿಯ ನಾಮ ಲೋಲ ಶ್ರೀ ಪುರಂದರ ವಿಠಲನ ಒಲುಮೆಗೆ ಹರಿಯ ನಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು