ಕೋತಿ ಹಾಗೆ ಕುಣಿದಾಡಬೇಡ

ಕೋತಿ ಹಾಗೆ ಕುಣಿದಾಡಬೇಡ

(ರಾಗ ನಾದನಾಮಕ್ರಿಯೆ ಅಟತಾಳ) ಕೋತಿ ಹಾಗೆ ಕುಣಿದಾಡಬೇಡ ರೀತಿಮಾರ್ಗವ ಹಿಡಿಯೆಲೊ ಮೂಢ ||ಪ|| ಆತುರ ಹಚ್ಚಿ ಕೂಗಾಡಬೇಡ ಪಾತಕ್ಕೆ ಈ ಜನ್ಮ ಬಿದದಿರೊ ಮೂಢ ||ಅ|| ಹಳ್ಳೂರು ಕೇರ್ಯಾಗೆ ಇರುವುದು ಹಂದಿ ನಾನಾ ಜನ್ಮವ ತಿರುಗುತ ಬಂದೆ ಇಷ್ಟು ಸಂಸಾರವ ಮರೆಮಾಡಿಕೊಂಡೆ ಮುಪ್ಪಿನ ಕಾಲಕ್ಕೆ ಅವಿಚಾರಗೊಂಡೆ || ಹೆಂಡರು ಮಕ್ಕಳು ಪ್ರಪಂಚಕ್ಕಾಗಿ ದುಡಿದುಹಾಕಿದ್ಯೋ ಮುದಿಕೋಣನಾಗಿ ಮಡಿದುಹೋಗುವಾಗ ದಾರಿಲ್ಲೊ ಗೂಗೆ ನಿನ್ನೊಳು ನೀನೆ ತಿಳಿದುಕೋ ಕಾಗೆ || ರಾಯರು ಇರುವರು ಮದಗಜದಂತೆ ಬಾಗಿ ನಡೀತೀರೋ ಬಿಡಿಸೂಳೆಯಂತೆ ಇಷ್ಟು ಸಂಸಾರ ಸ್ಥಿರವಲ್ಲದಂತೆ ಪುರಂದರವಿಠಲರಾಯ ಪದಮಾಡಿದಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು