ಕೊಡುವ ಕರ್ತು ಬೇರೆ

ಕೊಡುವ ಕರ್ತು ಬೇರೆ

(ರಾಗ ಸುರುಟಿ ಆದಿತಾಳ) ಕೊಡುವ ಕರ್ತು ಬೇರೆ , ಮನದಲ್ಲಿ ಬಿಡು ಬಿಡು ಚಿಂತೆಯನು ||ಪ|| ಬಡತನೈಶ್ವರ್ಯ ಎರಡಕ್ಕೆ ಕಾರಣ , ಒಡೆಯ ಶ್ರೀವೆಂಕಟರಮಣನು ತಾನೆ ||ಅ|| ಜನನವಾಗದ ಮುನ್ನ ಜನನಿಯ ತನುವಿನೊಳಗೆ ಪಾಲ ಜನನವಾದ ಬಳಿಕ ಜನನಿಯ ಮೊಲೆಯ ತುಳಿಯ ತುಳಿ- ಯುಣಿಸುತ ಬೆಳೆಸುವ ಜನವ || ಹೆಣ್ಣು ಹೊನ್ನು ಮಣ್ಣು, ಈ ಮೂರನು, ಮುನ್ನ ಪಡೆಯಲಿಲ್ಲ ಅನ್ಯರ ನೋಡಿ ಸಹಿಸಲಾರದೆ, ಖಿನ್ನನಾಗಿ ನೀ ಬಳಲುವುದೇಕೆ || ತಂದೆ ಫಲಗಳಿಲ್ಲದೆ ಇರುತಿರೆ, ತಂದು ಬಯಸಲುಂಟೆ ತಂದೆ ಪುರಂದರವಿಠಲರಾಯನ ದಯಬಾರೆ, ಅಂದಿಗೆ ಇಹಪರ ಸುಖಭೋಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು