ಕೊಡಬಹುದೇ ಮಗಳ

ಕೊಡಬಹುದೇ ಮಗಳ

( ರಾಗ ಶಂಕರಾಭರಣ ಅಟತಾಳ) ಕೊಡಬಹುದೇ ಮಗಳ ||ಪ|| ಹಿಡಿಬಿಟ್ಟಿಯನೆ ಮಾಡಿ ಹೀಗೆ ಸಮುದ್ರರಾಯ ||ಅ|| ಕುರುಹು ಖೂನಗಳಿಲ್ಲ , ಕೂಟ ಮಠಗಳಿಲ್ಲ ಅರಿಯರು ಆರಾರು ಆರ ಮಗನೆಂದು ಅರಸರ ಹೆಸರಿಗೆ ಸರಿಯಾದ ಅಳಿಯನಲ್ಲ ವರಸುಖಾಂಗಿಗೆ ತಕ್ಕ ವರನಹುದೆ ಇವ ಹಿರಿಯರೆಂಬುವರಾ ನೆರೆಹೊರೆಯ ಕಾಣದವ ವರಪುಟ್ಟತನದಲ್ಲಿ ಬಂಟರಿಗೆ ಖಳನಿವ ಹಿರಿದು ಬಲ್ಲಿದ ನಾಲ್ಕು ಹಸ್ತವುಳ್ಳವನಿವ ನಿರತ ಮೇಘ ಪೋಲ್ವ ಕರಿಯ ಮೈಯವನಿವ ಅರುಣ ಛಾಯದ ರೇಖೆಗಳುಳ್ಳ ನರಸಿಂಹ ಹಾರುವ ಹದ್ದಿನ ಮೆಚ್ಚಿದ ಉರದ ಮೇಲೆ ಭರದಿ ಒದೆಯ ಮೆಚ್ಚಿದ ಕರೆದ ಹಾಲು ದೊರೆಯೆ ಕುಡಿದು ಹೆಚ್ಚಿದ ಬ್ರಹ್ಮಾಂಡವ ತೋರಿಸಿ ವದನವ ಮುಚ್ಚಿದ ಅನೇಕಾದಿ ನಾರಿಯರ ಶ್ಯಾಲೆಗಳನು ಬಿಚ್ಚಿದವಗೆ || ಆಡಿಸಿ ಆಡಿಸಿ ಹತ್ತು ಅವತಾರದಿ ಪುಟ್ಟಿ ಕಡು ಕಪಟಿಯಲ್ಲದೆ ಭೂರಿಗುಣವಗಿಲ್ಲ ನಡತೇಲಿ ಸಲೆ ಲಜ್ಜೆ ನಾಚಿಕೆ ಇವಗಿಲ್ಲ ಹಿಡಿದು ಪೂತನಿ ಮೊಲೆಯುಂಡ ಚೊಕ್ಕಟ ಮಲ್ಲ ಕೆಡಹಿದ ಮಾವನ ಕೊಲೆಗಡುಕನು ಸಲ್ಲ ಹುಡುಕಬಂದರೆ ತಾನಡಗಬಲ್ಲ ಹಿಡಿಬಿಟ್ಟಿಯನೆ ಮಾಡಿ ಭೂತಳದೊಳಗೆಲ್ಲ ಮಡದಿಯರ ಸೀರೆಯ ಕದ್ದದ್ದು ಪುಸಿಯಲ್ಲ ಕಡಹದ ಮರನೇರಿದ ಹೆಂಗಳ ಶಿರ- ದಡಿಯೊಳು ಭಂಗವ ಮಾಡಿದ ಕಿರಾತನ್ನ ಕೊಡೆಯ ಬೆಟ್ಟಗಳಾಡಿದ ಕಾಳಿಂಗನ ಮಡುವ ಧುಮುಕಿ ನೋಡಿದ ವ್ಯಾಳನ , ಏಳು ಹೆಡೆಗಳ ಮೇಲೆ ತುಳಿದ ಫಣಿಪನ ಪೊಡವಿ ಈರಡಿ ಮಾಡಿದ, ರಥಂಗಳ ನಡೆಸಿ ನರಗೆ ಸಾರಥಿಯಾದ || ಆದರದಿಂದಲಿ ಕೊಳಲನೂದುತ ಗೋವುಗಳ ಕದಾಗ ಅಡವಿಯೊಳು ಸಾಧುಗೆ ಮಿಡಿ ಯಾರೊ ಈ ಧರೆಯೊಳಗಿವ ಪಿಡಿದನು ಕಾಳಿಯ ಯಾದವರಾಯ ಎಡೆಯಂಜಲುಂಬವನಿವ ಆದಿ ಅನಾದಿ ಅಂತ್ಯವಿಲ್ಲದೆ ಒಲಿವ ನಾಮ ಕ್ರೋಧದಿಂದಲಿ ಭಟರನ ಕೊಂದು ಕೂಗುತಲಿಹ ಮೋದದಿ ವೀರರೊಳು ಮೆರೆವಾ ಎಣಿಸಿದರಿನ್ನು ಆದಿನಿರ್ಜರಾಗುವ ಪಾಲಿಪನು ಸನಕಾದಿಗಳ ಪೊರೆವ ಹೃದಯ ಮೊದಲಿದ್ದು ಶ್ರೀದೇವಿಯಿಂದಲಿ ಮೆರೆವ ಶೇಷಾಚಲನಾದ ವಿನೋದಿಯಾ ಪುರಂದರವಿಠಲಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು