ಕೊಟ್ಟಸಾಲವ ಕೊಡದೆ

ಕೊಟ್ಟಸಾಲವ ಕೊಡದೆ

(ರಾಗ ಕೇದಾರಗೌಳ ಝಂಪೆತಾಳ) ಕೊಟ್ಟಸಾಲವ ಕೊಡದೆ ಭಂಡಾಟ ಮಾಡುತಾನೆ ||ಪ|| ಎಷ್ಟು ಬೇಡಿದರೆನ್ನ ಪೋಯೆನ್ನುತಾನೆ ||ಅ|| ಭರದಿ ಕೇಳಲು ಜಲದಿ ಕಣ್ಣು ಬಾಯ ಬಿಡುತಾನೆ ತರುಬಿ ಕೇಳಲು ಕಲ್ಲು ಹೊತ್ತೈತಾನೆ ಉರುಬಿ ಕೇಳಲು ಊರು ಅಡವಿಯೊಳಗಿರುತಾನೆ ಇರುಳು ಹಗಲಲ್ಲಿ ಕಾಣಿಸಿಕೊಳ್ಳುತಾನೆ || ಕಂಡು ನಿಲ್ಲಿಸಲೆಂದು ಕಾಲಿನಲ್ಲಿ ನಿಲ್ಲುತಾನೆ ಕೊಂಡ ಸಾಲಕೆ ಕೊಡಲಿ ಪಿಡಿಯುತಾನೆ ಉಂಡರಾಣೆಯೆನಲು ಉಪವಾಸವೈಧಾನೆ ಭಂಡುತನದಲಿ ಠಕ್ಕು ನಡೆಸ್ಯಾಡುತಾನೆ || ಕೆಟ್ಟು ಬೈಯಲು ಲಜ್ಜೆ ಹೇವವನು ತೊರೆವುತಾನೆ ಕೊಟ್ಟು ಹೋಗೆನಲು ಕಲಿಯಾಗುತಾನೆ ಸೃಷ್ಟಿಗೊಡೆಯ ಶ್ರೀರಂಗಪಟ್ಟಣದ ಪುರಂದರ- ವಿಟ್ಠಲೇಶನು ನಮ್ಮ ಪಶ್ಚಿಮದ ರಂಗನಾಥ ||
ದಾಸ ಸಾಹಿತ್ಯ ಪ್ರಕಾರ
ಬರೆದವರು