ಕೊಂಡಿರ್ಯಾ ನೀವು ಕೊಂಡಿರ್ಯಾ

ಕೊಂಡಿರ್ಯಾ ನೀವು ಕೊಂಡಿರ್ಯಾ

(ಕಾಲಿಂಗಡಾ ರಾಗ ದೀಪಚಂದಿ ತಾಳ) ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ|| ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧|| ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ||೨|| ಬೆಲೆಯು ಹೇಳುವದಲ್ಲ ನೆಲೆಯು ತಿಳಿಯುವದಲ್ಲ ||೩|| ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ ||೪|| ತೂಕ ಮಾಡುವದಲ್ಲ ಲೆಕ್ಕ ಇಡುವುದಲ್ಲ ||೫|| ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ ||೬|| ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ||೭|| ಹೇಳಿದೆ ನಾ ನಿಮಗೊಂದು ಸುಲಭವಾಗಿಂದು ||೮|| ಒಮ್ಮನವಾದರೆ ಸುಮ್ಮನೆ ಬಾಹುದು ||೯|| ಸಾಧು ಸಜ್ಜನರಿಗೆ ಸಾಧ್ಯವಾಗದಿದು ||೧೦|| ಸಾರಿ ಚಲ್ಲಿದ ಮಹಿಪತಿ ವಸ್ತುಮಯವಿದು ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು