ಕೂಸು ಕಂಡೀರ್ಯಾ

ಕೂಸು ಕಂಡೀರ್ಯಾ

(ರಾಗ ಕಲ್ಯಾಣಿ ಆದಿತಾಳ) ಕೂಸು ಕಂಡೀರ್ಯಾ , ಜ್ಞಾನಿಗಳೆಲ್ಲ ಕೂಸು ಕಂಡೀರ್ಯಾ || ಪ|| ಸಾಸಿರನಾಮದ ಶತಕೋಟಿತೇಜದ ಸೂಸುವ ಸುಖಮಯ ಜ್ಞಾನದ ಕೂಸು ||ಅ|| ಜ್ಞಾನಸಮುದ್ರದೊಳಾಡುವ ಕೂಸು ಜ್ಞಾನಿ ಹೃದಯದಿ ಹೊಳೆಯುವ ಕೂಸು ದೀನದಾಸರಿಗೆ ಕಾಣುವ ಕೂಸು ತಾನೆ ಬಲ್ಲುದು ತನ್ನ ಮಹಿಮೆಯ ಕೂಸು || ಲೋಕತ್ರಯವೆಲ್ಲ ನೋಡುವ ಕೂಸು ಬೇಕಾದ ಭಕ್ತರೊಳಾಡುವ ಕೂಸು ಆಕಾರವಿದ್ದು ನಿರಾಕಾರ ಕೂಸು ಸಾಕಾರದೃಷ್ಟಿಗೆ ಸಿಲುಕದ ಕೂಸು || ತನುಮನಧನದೊಳು ಕುಳಿತಿಹ ಕೂಸು ಘನವಾದ ಮಹಿಮೆಗೆ ಕಾರಣ ಕೂಸು ಬಿನುಗು ಬುದ್ಧಿಗೆ ಎಂದೂ ಸಿಲುಕದ ಕೂಸು ಚಿನುಮಯ ಪುರಂದರ ವಿಟ್ಠಲ ಕೂಸು ||
ದಾಸ ಸಾಹಿತ್ಯ ಪ್ರಕಾರ
ಬರೆದವರು