ಕೂಸಿನ ಕಂಡೀರ್ಯಾ

ಕೂಸಿನ ಕಂಡೀರ್ಯಾ

(ರಾಗ ನಾದನಾಮಕ್ರಿಯೆ ಆದಿತಾಳ) ಕೂಸಿನ ಕಂಡೀರ್ಯಾ , ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ|| ಬಾಲನ ಕಂಡೀರ್ಯಾ ಬಲವಂತನ ಕಂಡೀರ್ಯಾ ||ಅ.ಪ || ಅಂಜನೆಯುದರದಿ ಪುಟ್ಟಿತು ಕೂಸು ರಾಮನ ಚರಣಕೆ ಎರಗಿತು ಕೂಸು ಸೀತೆಗೆ ಉಂಗುರ ಕೊಟ್ಟಿತು ಕೂಸು ಲಂಕಾಪುರವನೆ ಸುಟ್ಟಿತು ಕೂಸು || ಬಂಡಿ ಅನ್ನವನುಂಡಿತು ಕೂಸು ಬಕನ ಪ್ರಾಣವ ಕೊಂದಿತು ಕೂಸು ವಿಷದ ಲಡ್ಡುಗೆ ಮೆದ್ದಿತು ಕೂಸು ಮಡದಿಗೆ ಪುಷ್ಪವ ಕೊಟ್ಟಿತು ಕೂಸು || ಮಾಯಾವಾದಿಗಳ ಗೆದ್ದಿತು ಕೂಸು ದ್ವೈತಮತವನುದ್ಧರಿಸಿತು ಕೂಸು ಮಧ್ವರಾಯರೆಂಬ ಪೆಸರಿನ ಕೂಸು ಪುರಂದರವಿಠಲನ ಪ್ರೇಮದ ಕೂಸು ||
ದಾಸ ಸಾಹಿತ್ಯ ಪ್ರಕಾರ
ಬರೆದವರು