ಕುಣಿದಾಡೊ ಕೃಷ್ಣ ಕುಣಿದಾಡೊ

ಕುಣಿದಾಡೊ ಕೃಷ್ಣ ಕುಣಿದಾಡೊ

(ರಾಗ ಪಂತುವರಾಳಿ ಏಕತಾಳ) ಕುಣಿದಾಡೊ ಕೃಷ್ಣ ಕುಣಿದಾಡೊ ಫಣಿಯ ಮೆಟ್ಟಿ ಬಾಲವ ಪಿಡಿದು ಕುಣಿಕುಣಿದಾಡುವ ಪಾದದೊಳೊಮ್ಮೆ ||ಪ|| ಮುಂಗುರುಳುಂಗುರ ಜಡೆಗಳರಳೆಲೆ ಪೊಂಗೊಳಲಲಿ ರಾಗಂಗಳ ನುಡಿಸುತ್ತ ತ್ರಿ- ಭಂಗಿಯಲಿ ನಿಂದು ಧಿಗಿಧಿಗಿತಾಂಗಿಣ- ತಾಂಗಿಣಾ ಥಕ್ಕಥಕ್ಕಧಿಮಿಯೆಂದು || ಮುಖಜಾರಿದು ಫುಲ್ಲಗವಾಜಿಯೆ ಝೆಂ ಝೆಂ ಝೆಂ ಚುಂಬನಕಾಗಿ ಝಣಾಂ ಝಣಾ ಝೆಂ ಕಿಟತಾಕಿಟಕಿಟ ತೋಂಗಿಣತೋ- ಧೆಮಿ ತೋಂಗಿಣ ಪಾದದೊಳೊಮ್ಮೆ || ಪ್ರಕಟದಿ ದಿನಗಳು ಪರಿಚಾರಂಗಳು ವಿಕಲಿತ ನಾಟಕಭೇರಿಗಳು ತೊಂಕಿಣಿ ತೊಂಹಿರಿ ತೊಂತರಿ ತರಿಗಿಟ ತಕ್ಕಿಟತರಿಕಿಟ ತಕಿಟ ಶಬ್ದದಿ ಪೆರಣಗಾಂಚಿತ್ತಲೆದಂವೆಗಂ ಸರಹರಪ್ರತಿಜವಾಗರಶೆಂದ ಶ್ರುಣಾಂ ಉರ್ರಾಂ ಎಂದು ಧಿಮಿಕಿಟ ಧಿಮಿಕಿಟ ತಧಿಕುತ ಧಿಕುತ ತದ್ದಾಥೈ ಎಂದು || ಪಂಚಸ್ಥಳದಲಿ ಲಘುವಿಡಿದೊಮ್ಮೆ ಗಣಪತಿ ನರಸಿಂಹ ಕೋನೇರಿ ತಿಮ್ಮ ಪಂಚನಾಟಕಭೇದವ ವಾಜಿಸುತ್ತ ಉಡುಪಿಲಿ ನಿಂದನು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು