ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ

ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ

(ರಾಗ ಕಲ್ಯಾಣಿ ಅಟತಾಳ) ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ ಕಲ್ಲು ಸಕ್ಕರೆ ಕೊಳ್ಳಿರೋ|| ಪ|| ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು ಪುಲ್ಲ ಲೋಚನ ಶ್ರೀಕೃಷ್ಣ ನಾಮವೆಂಬ || ಅ.ಪ|| ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ ಒತ್ತ್ಯೊತ್ತಿ ಗೋಣಿಯೋಳ್ ತುಂಬುವುದಲ್ಲ ಎತ್ತ ಹೋದರು ಬಾಡಿಗೆ ಸುಂಕ ಇದಕಿಲ್ಲ ಉತ್ತಮ ಸರಕಿದು ಅತೀ ಲಾಭ ಬರುವಂಥ || ನಷ್ಟ ಬೀಳುವುದಿಲ್ಲ ನಾತ ಹುಟ್ಟುವುದಿಲ್ಲ ಎಷ್ಟು ಒಯ್ದರು ಬೆಲೆರೊಕ್ಕವಿದಕಿಲ್ಲ ಕಟ್ಟಿರುವೆಯು ತಿಂದು ಕಡಿಮೆಯಾಗುವುದಲ್ಲ ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ || ಸಂತೆ ಸಂತೆಗೆ ಹೋಗಿ ಶ್ರಮ ಪಡಿಸುವುದಲ್ಲ ಸಂತಯೊಳಗೆ ಇಟ್ಟು ಮಾರುವುದಲ್ಲ ಸಂತತ ಭಕ್ತರ ನಾಲಿಗೆ ಸವಿಗೊಂಬ ಕಾಂತ ಪುರಂದರ ವಿಠ್ಠಲನಾಮವೆಂಬ ||
ದಾಸ ಸಾಹಿತ್ಯ ಪ್ರಕಾರ
ಬರೆದವರು