ಕಲಿಯುಗದೊಳು ಹರಿನಾಮವ ನೆನೆದರೆ

ಕಲಿಯುಗದೊಳು ಹರಿನಾಮವ ನೆನೆದರೆ

(ರಾಗ್ ಬೇಹಾಗ್ ಆದಿತಾಳ) ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು ||ಪ|| ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆಮನವೆ ||ಅ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆಮನವೆ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆಮನವೆ || ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ ಅಪಾರಮಹಿಮ ಶ್ರೀಪುರಂದರವಿಠಲನ ಉಪಾಯದಿಂದಲಿ ನೆನೆಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು