ಕರೆದರೆ ಓ ಎನ್ನಬಾರದೆ

ಕರೆದರೆ ಓ ಎನ್ನಬಾರದೆ

(ರಾಕ ಖಮಾಚ್ ಆದಿತಾಳ) ಕರೆದರೆ ಓ ಎನ್ನಬಾರದೆ ||ಪ|| ಲಕ್ಷ್ಮೀರಮಣ, ಕರೆದರೆ ಓ ಎನ್ನಬಾರದೆ ||ಅ|| ಹಿರಣ್ಯಕನ ಉದರದಲ್ಲಿ ಬಂದ ಪ್ರಹ್ಲಾದನ ಪರಿಪರಿ ದುರಿತಗಳೆಲ್ಲಾ ಪರಿಹರಿಸಿ ಕಾಯಿದಂಥಾ ಸ್ವಾಮಿ || ಭೀಮರಥಿಯೊಳಗೊಬ್ಬ ದಾಸ ಮುಣುಗಿ ಪೋಗಿರಲು ಪೂಮಾಲೆ ಪೀತಾಂಬರವನು ತೋಯದೆ ಕಾಯಿದಂಥಾ ಸ್ವಾಮಿ || ಅಂತ್ಯಕಾಲ ಸಮಯದಲ್ಲಿ ಅರಿಯದೆ ಅಜಮಿಳನು ಅಂತ್ಯಾ ಸುತನ ಕೂಗಲು ವೈಕುಂಠಪದವಿತ್ತಂಥ ಸ್ವಾಮಿ || ದುರುಳ ದುಶ್ಶಾಸ ಬಂದು ಸೆರಗ ಪಿಡಿದು ಸೆಳೆಯುವಾಗ ತರುಣಿ ದ್ರೌಪದಿಯಭಿಮಾನವ ತ್ವರದಿ ಕಾಯಿದಂಥ ಸ್ವಾಮಿ || ಇಂತಿಂಥ ಭಕುತರಿಗೆ ಚಿಂತೆಯ ಪರಿಹರಿಸಿ ಕಂತುಪಿತ ಪುರಂದರವಿಠಲನಿಂತು ಕಾಯಿದಂಥಾ ಸ್ವಾಮಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು