ಕರುಣಾನಿಧಿಯೆ ಈಶ ( ರುದ್ರದೇವರ ಸ್ತೋತ್ರ)

ಕರುಣಾನಿಧಿಯೆ ಈಶ ( ರುದ್ರದೇವರ ಸ್ತೋತ್ರ)

( ರಾಗ ಮುಖಾರಿ ಆದಿತಾಳ) ಕರುಣಾನಿಧಿಯೆ ಈಶ ಅರುಣಗಿರಿಯ ವಾಸ ||ಪ|| ಮುರನವೈತ್ರಿಯ ಚರಣದಾಸ ಅರುಣರವಿಯ ಕೋಟಿಪ್ರಕಾಶ ||ಅ|| ಭಸ್ಮಧೂಳಿತ ಸರ್ವಾಂಗ ಮತ್ತೆ ತಲೆಯೊಳಿಪ್ಪ ಗಂಗಾ ವಸ್ತ್ರರಹಿತ ದಿಗಂಬರ ಲಿಂಗ ಕಸ್ತೂರಿರಂಗನ ಪಾದದ ಭೃಂಗ || ಮತ್ತೆ ತ್ರಿಪುರಸಂಹಾರಿ ಚಿತ್ತಜನಯ್ಯನ ಸೇರಿ ಹಸ್ತದಿ ಶೂಲ ಕಪಾಲಧಾರಿ ಕರ್ತು ಶ್ರೀ ಹರಿಗೆ ನಿಜವ ತೋರಿ || ನಂದಿಗೆ ನರಗೆ ಬಾಹ್ವ ಚಂದ್ರನು ಶಿರದಲಿಪ್ಪ ಇಂದ್ರನ ತೀರ್ಥ ದಡದಲ್ಲಿಪ್ಪ ಎಂದೆಂದಿಗು ನಮ್ಮನು ಪಾಲಿಸುತಿರ್ಪ || ಬೇಡಿದ ವರಗಳನೀವ , ಮತ್ತೆ ಬೇಡಿದ ಭಕ್ತರ ಕಾವ ಜಡೆಯ ಮರಳು ಶಿರಳು ಭಾವ ಕೊಂಡಾಡುವರೊಳಗೆಲ್ಲ (/ ಕೊಂಡಾಡುವದೊಳಗೆಲ್ಲ ) ಎನ್ನದು ಶಿವ || ಪರ್ವತಿಪುರದ ನಾಥ ಕರುಣಿಸು ಸಂತತ ದಾತ ನಾರದಪ್ರಿಯ ಪ್ರಖ್ಯಾತ ಪುರಂದರವಿಠಲನ ದೂತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು