ಕಣ್ಣಾರೆ ಕಂಡೆನಚ್ಯುತನ

ಕಣ್ಣಾರೆ ಕಂಡೆನಚ್ಯುತನ

(ರಾಗ ಧನಶ್ರೀ ಅಟತಾಳ ) ಕಣ್ಣಾರೆ ಕಂಡೆನಚ್ಯುತನ , ಕಂಚಿ ಪುಣ್ಯಕೋಟಿ ಕರಿರ್‍ಆಜವರದನ ||ಪ|| ವರ ಮಣಿಮುಕುಟಮಸ್ತಕನ , ಸರ್ವ ಸುರಸನಕಾದಿ ವಂದಿತ ಪಾದಯುಗನ ತರುಣಿ ಲಕ್ಷ್ಮಿಮನೋಹರನ , ಪೀತಾಂ- ಬರದುಡುಗೆಯಲ್ಲಿ ರಂಜಿತ ವಿಗ್ರಹನ || ಕಸ್ತೂರಿತಿಲಕನೊಸಲನ , ತೋರ- ಮುತ್ತಿನಹಾರ ಪದಕಭೂಷಣನ ಎತ್ತಿದಾಭಯಹಸ್ತನ , ತನ್ನ ಭಕ್ತರ ಸ್ತುತಿಗೆ ಹಾರೈಸಿ ಹಿಗ್ಗುವನ || ನೀಲಮೇಘಶ್ಯಾಮನ , ಬಾಲ ಲೋಲ ಮಕರಕುಂಡಲ ಧರಿಸಿಹನ ಮೂಲೋಕದೊಳಗೆ ಚೆನ್ನಿಗನ, ಉಮಾ- ಲೋಲಜ ವಂದ್ಯ ವೈಕುಂಠವಲ್ಲಭನ || ಭಾನುಕೋಟಿತೇಜದವನ , ಭವ- ಕಾನನರಾಶಿಗೆ ಹವ್ಯವಾಹನನ ದಾನವರೆದೆಯ ತಲ್ಲಣನ, ಮುನಿ- ಮಾನಸಹಂಸ ಎಂದೆನಿಸಿಕೊಂಬವನ || ತುಂಗಚತುರ್ಭುಜದವನ , ಶುಭ- ಮಂಗಳ ರೇಖೆ ಅಂಗಾಲಲೊಪ್ಪುವನ ಶೃಂಗಾರಹಾರ ಕಂಧರನ , ದೇವ- ಗಂಗೆಯ ಪಿತ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು