ಕಂದ ಹಾಲ ಕುಡಿಯೋ

ಕಂದ ಹಾಲ ಕುಡಿಯೋ

(ರಾಗ ಕಲ್ಯಾಣಿ , ಛಾಪುತಾಳ) ಕಂದ ಹಾಲ ಕುಡಿಯೋ , ಎನ್ನ ಗೋ- ವಿಂದ ಹಾಲ ಕುಡಿಯೋ ||ಪ|| ಮಂದರಧರ ಗೋವಿಂದ ಮುಕುಂದ ಕಂದ ಹಾಲ ಕುಡಿಯೋ ||ಅ|| ಶೃಂಗಾರವಾದ ಗೋವಿಂದ ಚೆನ್ನ ಪೊಂಗೊಳಲನೂದುತ ಬಂದ ಅಂಗನೇರು ನಿನ್ನ ಚಂದ ನೋಡಿ ಭಂಗಪಟ್ಟರು ಕಂಡ ದೇವಯ್ಯ || ಆಕಳ ಬಳಿಗೆ ಓಡಾಡಿ , ಹರಿ ಶ್ರೀಕಾಂತೇರ ಒಡಗೂಡಿ ಲೌಕಿಕ ಆಟಗಳಾಡಿ , ನಮಗೆ ಬೇಕೆಂಬೋ ಸುಖವೀವ ಕಂದ ದೇವಯ್ಯ || ಸದಮಲ ಯೋಗಿಗಳೆಲ್ಲ , ಪಾದ- ಪದುಮವ ನಂಬಿದರೆಲ್ಲ ಯದುಕುಲತಿಲಕ ಗೋಪಾಲ , ಹಯ- ವದನ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು