ಕಂಡೆ ಕರುಣಾನಿಧಿಯ

ಕಂಡೆ ಕರುಣಾನಿಧಿಯ

(ರಾಗ ನಾದನಾಮಕ್ರಿಯೆ ಆದಿತಾಳ ) ಕಂಡೆ ಕರುಣಾನಿಧಿಯ , ಗಂಗೆಯ ಮಂಡೆಯೊಳಿಟ್ಟ ದೊರೆಯ ||ಪ || ಶಿವನ , ರುಂಡಮಾಲೆ ಸಿರಿಯ , ನೊಸಲೊಳು , ಕೆಂಡಗಣ್ಣಿನ ಬಗೆಯ ಹರನ ||ಅ.ಪ|| ಗಜಚರ್ಮಾಂಬರನ , ಗೌರಿಯ , ವರ ಜಗದೀಶನ, ತ್ರಿಜಗನ್ಮೋಹನ , ತ್ರಿಪುರಾಂತಕ , ತ್ರಿಲೋಚನ ಶಿವನ ಹರನ || ಭಸಿತಭೂಷಣ ಹರನ , ಭಕ್ತರ , ವಶದೊಳಗಿರುತಿಹನ, ಪಶುಪತಿಯೆನಿಸುವನ , ವಸುಧೆಲಿ , ಶಶಿಶೇಖರ ಶಿವನ ಹರನ || ಕಪ್ಪುಗೊಳನ ಹರನ ಕಂ , ದರ್ಪಪಿತನ ಸಖನ , ಮುಪ್ಪುರ ಗೆಲಿದವನ , ಮುನಿಸುತ , ಸರ್ಪಭೂಷಣ ಶಿವನ ಭವನ || ಕಾಮಿತಫಲವೀವ , ಭಕುತರ , ಪ್ರೇಮದಿ ಸಲಹುವನ, ರಾಮನಾಮಸ್ಮರನ , ರತಿಪತಿ , ಕಾಮನ ಸಂಹರನ ಶಿವನ || ಧರೆಗೆ ದಕ್ಷಿಣ ಕಾಶಿ , ಎನಿಸುವ , ಪುರಪಂಪಾವಾಸಿ , ತಾರಕವುಪದೇಶಿ , ಪುರಂದರ , ವಿಠಲ ಭಕ್ತಪೋಷಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು