Skip to main content

ಒಬ್ಬ ಸತಿ ಪತಿಗಾಗಿ

ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ
ಅಬ್ಜ ಬಾಂಧವನ ನಿಲಿಸಿದಳು ನೋಡಾ
ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ
ನಿಬ್ಬರದಿ ಪ್ರಾಣವ ಪಡೆದಳು ನೋಡಾ
ಒಬ್ಬ ಸತಿ ಪತಿಗಾಗಿ ಚಿತ್ರಗುಪ್ತರು ಆಡಿದ
ಶಬ್ದ ಆಲಿಸಿ ಐದೆತನ ಪಡೆದಳು
ಊರ್ವಿಯೊಳಗೀಪರಿ ಸತಿಯರ ಸ್ವಧರ್ಮ
ನಿಬಿಡವಾಗಿದೆ ನಿನ್ನ ದಯದಿ
ಅಬ್ಜನಾಭನೆ ಇವನ ಮೇಲೆ ದಯಮಾಡು
ಕರುಣಾಬ್ಧಿಯೆ ಉಪೇಕ್ಷೆ ಮಾಡದೆಲೆ
ಅಬ್ಬರ ದೈವವೆ ಸಿರಿ ವಿಜಯವಿಠಲರೇಯ
ಲಬ್ಧವಾಗಲಿ ಬೇಡಿದ ಅಭಯವೂ |

ದಾಸ ಸಾಹಿತ್ಯ ಪ್ರಕಾರ: 
ಬರೆದವರು: