ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ

( ರಾಗ ಮಾಯಾಮಾಳವಗೌಳ ಆದಿತಾಳ) ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ||ಪ|| ತನುವೆಂಬ ಕಲ್ಲಿನೊಳು ಮನವೆಂಬೊ ಧಾನ್ಯವ ತುಂಬಿ ವನವನದು ನವಬೇಳೆ ಬೀಸಿದನೆ || ಅಷ್ಟ ಕರ್ತೃಗಳೆಂಬೊ ಅಷ್ಟ ನವಧಾನ್ಯವ ತಂದು ಕುಟ್ಟಿ ಕಟ್ಟಿ ಕಜ್ಜಾಯ ಕರಿದೆನೆ || ಅಷ್ಟ ಕರ್ತೃಗಳೆಂಬೊ ಕಾಲವನ್ನುಳುಹಿ ನಾನು ನಿಷ್ಠೆಯಿಂದಲಿ ಅನ್ನವ ಬಾಗಿದೆನೆ || ಅಷ್ಟರೊಳಗೆನ್ನ ಗಂಡ ಬಂದು ಆಡುವ ಮಡಿಕೆಯ ಒಡೆದು ಮುಟ್ಟಿ ಮುರಿದು ಮೂಲೆಗೆ ಹಾಕಿದನೆ || ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ ತಿರುಗಿ ಬಾರದ್ಹಾಂಗೆ ಮಾಡಿದನೆ || ಮಾಡಿದೆ ಒಗತನವ ನಂಬಿಕಿಲ್ಲದ ಸಂಸಾರವ ನೆಚ್ಚಿ ಕೂಡಿದೆ ಪುರಂದರವಿಠಲನ್ನ ದಾಸರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು