ಏನೆಂದಳಯ್ಯ ಸೀತೆ

ಏನೆಂದಳಯ್ಯ ಸೀತೆ

( ರಾಗ ನಾದನಾಮಕ್ರಿಯಾ. ಝಂಪೆ ತಾಳ) ಏನೆಂದಳಯ್ಯ ಸೀತೆ, ಹನುಮ ನಿನಗೆ ಏನ್ನುಡಿದಿಹಳು ಪ್ರೀತೆ ||ಪ|| ಚೆನ್ನಿಗ ಚೆಲುವನೆ ಕೇಳೋ , ಜಾನಕಿಯು ನಿನ್ನ ಬಿಟ್ಟಿರಲಾರಳು ನಿನ್ನಿರುಳು ನೀ ನೀಲಕುಂತಳೆ ಕನಸಿನಲಿ ಚೆನ್ನಾಗಿ ನಿಂತಿಹಳೊ ರಾಮ || ಸ್ವಾಮಿರಾಯರ ಪಾದವ, ಎಲೆ ಕಪಿಯೆ ನಾನೆಂತು ಬಿಟ್ಟಿರಲಿ ದಾನವನ ಶಿರವರಿದು ಲಂಕೆಯ ಪುರವನ್ನು ದಹನವನು ಮಾಡೆಂದಳೊ ರಾಮ || ಎಲ್ಲಿಂದ ಬಂದೆ ಹನುಮ, ನೀನೆಂದ ಸೊಲ್ಲ ಕೇಳೋ ಪ್ರೇಮ ವಲ್ಲಭ ಕಾಣದೆ ನಿಮಿಷ ಯುಗವಾಗಿದೆ ನಿಲ್ಲಲಾರೆ ಎಂದಳು ರಾಮ || ಚಿಂತಿಸುತ ಬಡವಾದಳೊ, ಜಾನಕಿಯು ಕಾಂತೆ ತಾನಾಗಿಹಳೊ ಅಂತರಂಗದಿ ಅನಂತ ಅನಂತ ಎನುತ ಭ್ರಾಂತಿಲಿ ಮರುಗುತಿಹಳೊ ರಾಮ|| ಅಂಜನೆಯತನಯ ಕೇಳೋ, ನೀ ಪೋಗೆ ಕಂಜನಾಭನಿಗೆ ಹೇಳೊ ಕುಂಜರನ ಕಾಯ್ದ ಶ್ರೀಪುರಂದರವಿಠಲನ್ನ ಪಂಜರದ ಅರಗಿಣಿ ಎಂದಳು ರಾಮ || ( ಈ ಹಾಡನ್ನು ದಿವಂಗತ ಮೈಸೂರು ಅನಂತಸ್ವಾಮಿ ಮತ್ತು ಪದ್ಮಾವತಿ ಅವರ ದನಿಯಲ್ಲಿ ಇಲ್ಲಿ ( http://www.kannadaaudio.com/Songs/Bhaavageethe/Tharakka-Bindige-Mysore-Ananthaswamy/Enendhelalayya.ram ) ಕೇಳಿರಿ)
ದಾಸ ಸಾಹಿತ್ಯ ಪ್ರಕಾರ
ಬರೆದವರು