ಏನಾಯಿತು ರಂಗಗೆ

ಏನಾಯಿತು ರಂಗಗೆ

(ರಾಗ ಶಂಕರಾಭರಣ ಅಟ ತಾಳ) ಏನಾಯಿತು ರಂಗಗೆ ನೋಡಿರಮ್ಮ ||ಪ|| ನಿಧಾನಿಸಿ ಎನಗೊಂದು ಪೇಳಿರಮ್ಮ ||ಅ.ಪ|| ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ , ತಾನು ಎಷ್ಟಾದರು ಮೊಲೆಯುಣ್ಣನಮ್ಮ ತಟುಕು ಮುಖ ಮೇಲಕೆತ್ತನಮ್ಮ, ಹೀಗೆ ಎಷ್ಟು ಹೇಳಲಿ ಬಾಯ ಮುಚ್ಚನಮ್ಮ ಕಾಯ ಇದ್ದ್ ಹಾಗಿದ್ದು ಹೆಚ್ಚಿತಮ್ಮ ಹೆತ್ತ ತಾಯಿ ನೆಲವಿಲ್ಲದಾಯಿತಮ್ಮ ನೋಯನೋಟದಿ ಅಬ್ಧಿ ಬತ್ತಿತಮ್ಮ ಅವನ ಬಾಯೊಳಗೆ ವಿಶ್ವ ತೋರಿತಮ್ಮ ಅತ್ಯಂತ ಮಾತುಗಳನಾಡಿದನಮ್ಮ ಮುಂದೆ ಸತ್ಯಾಗೆ ಕುದುರೆ ಏರುವನಮ್ಮ ನಿತ್ಯ ನಿರ್ದೋಷ ಪುರಂದರ ವಿಟ್ಠಲ ತನ್ನ ಭಕ್ತರ ಸಲಹುವ ದೇವನಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು