ಏಕೆ ಗೋಪಾಲ ಕರೆಯುತಾನೆ

ಏಕೆ ಗೋಪಾಲ ಕರೆಯುತಾನೆ

( ರಾಗ ಶಂಕರಾಭರಣ. ಆದಿ ತಾಳ) ಏಕೆ ಗೋಪಾಲ ಕರೆಯುತಾನೆ, ಎಲೆ ಸಖಿಯೆ ಎನ್ನ ಏಕೆ ಗೋಪಾಲ ಕರೆಯುತಾನೆ ||ಪ|| ಕಣ್ಣು ಸನ್ನೆಯ ಮಾಡುತಾನೆ ಮಾತು ಬಗೆಬಗೆ , ಹಣ್ಣು ಕೈಯಲಿ ತೋರುತಾನೆ , ಎನ್ನ ಚೆಲುವಿಕೆ ಬಣ್ಣಿಸುತಲಿ ತಿರುಗುತಾನೆ, ಇವ ನೂರು ವರಹ ಕಾಣಿಕೆ ಕೊಟ್ಟು ಎನ್ನ ಮದುವೆಯಾಗಿಹನೇನೆ || ಹವಳ ಸರವ ತೋರುತಾನೆ, ದುಂಡು ಮುತ್ತಿನ ಧವಳಹಾರವ ಬೀಸುತಾನೆ, ಒಂದ್ಹಾಸಿಗೆ ಮೇಲೆ ಇವ ಹಗಲೆ ಬಾರೆಂದು ಕರೆಯುತಾನೆ, ಕಾಮನಾಟಕೆ ಹವಣಿಪುದು ಕಂಡರೆ ನಮ್ಮವರು ಸುಮ್ಮನೆ ಇಹರೇನೆ || ಬಗಲು ಬಿಗಿದಪ್ಪುತಾನೆ ನೋಡೆ, ಬಟ್ಟ ಬಯಲೊಳು ಮೊಗಕೆ ಮೊಗವಿಟ್ಟು ಮುದ್ದಿಸುತಾನೆ, ಎನ್ನ ಮನಸು ಧಿಗಿಲುಧಿಗಿಲೆಂದು ನಡುಗಿತು ಕಾಣೆ, ಪುರಂದರವಿಠಲನೆ ಮಿಗಿಲಾಗಿ ಮನ್ನಿಸಿ ನನ್ನ ಮಗನಾಣೆ ಇಟ್ಟು ಮರಳಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು