ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ

ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ

( ರಾಗ ಕಾಂಭೋಜ. ಝಂಪೆ ತಾಳ) ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ ಸಾಕಲಾರದೆ ಎನ್ನೆನೇಕೆ ಪುಟ್ಟಿಸಿದೆ ||ಪ|| ಎನ್ನ ಕುಲದವರಿಲ್ಲ , ಎನಗೊಬ್ಬ ಹಿತರಿಲ್ಲ ಮನ್ನಿಸುವ ದೊರೆಯಿಲ್ಲ , ಮನಕೆ ಜಯವಿಲ್ಲ | ಹೊನ್ನು ಚಿನ್ನಗಳಿಲ್ಲ , ಒಲಿಸಿಕೊಂಬುವರಿಲ್ಲ ಇನ್ನಿಲ್ಲಿ ತರವಲ್ಲ, ಇಂದಿರೇಶನು ಬಲ್ಲ || ದೇಶ ಪರಿಚಯವಿಲ್ಲ, ದೇಹದೊಳು ಬಲವಿಲ್ಲ ವಾಸಿಪಂಥಗಳೆಂಬೊ ಒಲುಮೆಯೆನಗಿಲ್ಲ | ಬೇಸರ ಕಳೆವರಿಲ್ಲ, ಬೇರೆ ಹಿತ ಜನರಿಲ್ಲ ವಾಸುದೇವನೆ ಬಲ್ಲ ಈ ರಾಜ್ಯವೆಲ್ಲ || ಕರೆದು ಕೊಡುವರಿಲ್ಲ, ಕರುಣ ತೋರುವರಿಲ್ಲ ಕಮಲಾಕ್ಷನಲ್ಲದೆ ಗತಿಯೊಬ್ಬರಿಲ್ಲ ಕನಸಿನಲಿ ಕಳುವಿಲ್ಲ, ಮನಸಿನಲಿ ದೃಢವಿಲ್ಲ ವನಜಾಕ್ಷ ಪುರಂದರವಿಠಲ ತಾ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು