ಎಷ್ಟು ತಾಳಲಿ ಗೋಪ್ಯಮ್ಮ

ಎಷ್ಟು ತಾಳಲಿ ಗೋಪ್ಯಮ್ಮ

( ರಾಗ ಕೇದಾರಗೌಳ. ಅಟ ತಾಳ) ಎಷ್ಟು ತಾಳಲಿ ಗೋಪ್ಯಮ್ಮ , ಏನು ಮಾಡಲಿ ನಿಮ್ಮ ಕೃಷ್ಣನಟ್ಟುಳಿಯ ಘನ, ಇಂದಿನ ದಿನ ||ಪ|| ಉದಯವಾಗದ ಮುನ್ನ ಉದಧಿಶಯನ ನಿನ್ನೆ ದಧಿಘೃತದ ಓಕುಳಿಯೆಮ್ಮೊಳು ಆದಿ ಚದುರೆರೆಲ್ಲರು ಕೂಡಿ ಸಾರಿಯಾಜ್ಞೆಯ ಮಾಡಿ ಸೂರೆಗೊಂಬುವರೆ ಹೀಗೇ ಸುಮ್ಮನೆ ಹೇಗೆ || ಬಿಡದೆ ಮನೆಯ ಪೋಗಬೇಡವೆಂದರೆ ಮಿಕ್ಕ ಎಲ್ಲಿ ಕಂಡರಲ್ಲಿ ಸಿಕ್ಕ ಎಂಥವನಕ್ಕ ಹಲವು ಮಾತುಗಳಾಡಿ ಸಲುಗೆಯಿಂದ ಕೂಡಿ ನಿಲುಕಿ ನಿಲುಕಿ ನೋಡಿ ಬೇಗದಿ ಓಡಿ || ಗುಡುಗನಿಕ್ಕುತ ಬಂದನಡು ಮನೆಯಲಿ ನಿಂದ ಕಡವ ಕಡೆಗೋಲನು ಪಿಡಿದು ತಂದ ಹಿಡಿ ಹಿಡಿ ಎಂದರೆ ನಡೆವ ನಟನೆಯಂದ ನಡುಬೀದಿಯಲಿ ನಂಬಿಸುತಲು ಬಂದ || ನಂಬಿಸಿ ಹತ್ತಿರ ಬಂದನಲ್ಲೆ ಕಕ್ಕುತ ನಿಂದ ಜಡೆಯ ಪಿಡಿದು ಹಾರಿ ಹೆಗಲನೇರಿ ಕಣ್ಣಮುಚ್ಚಿನ ಆಟವಾ ಆಡುತಾಡುತ ಬಂದ ಸಣ್ಣ ಒಲ್ಲಿಯ ಮುಸುಕಿಟ್ಟನೆಂತವ ದಿಟ್ಟ || ಬಗೆಬಗೆ ಕಟಿಯಿಂದ ನೆರೆದು ಚುಂಬಿಸಿ ಬಂದ ಶಶಿಮುಖಿಯರೊಳಗೆ ಮಾಡ್ವರೆ ಹೀಗೆ ಮುಗುಳುನಗೆಯ ನಕ್ಕು ಮುದ್ದಿಸಿಯಾಡಿದನಕ್ಕ ಹೊದ್ದಿ ಎನ್ನ ಬೆನ್ನನೇರಿ ಗುದ್ದಿದನಕ್ಕ || ತಂದೆತಾಯ್ಗಳ ಬೈದ ತಳಿತಳಿರೆಲೆ ಕೊಯ್ದ ಒಂದು ಮಾತಾದರು ಪೇಳೆ ತರವಲ್ಲ ಕೇಳೆ ಎಳೆತುಳಸಿಯ ಕಿತ್ತ ಎಂಜಲು ಗುಳಿದಸುವ ಕಡೆಗಣ್ಣಿನಲಿ || ಕಂಡ ಖಳರ ಗಂಡ ಹಡಗನೇರುತ ಬಂದ ಬಿಡದೆ ಉಡುಪಿಲಿ ನಿಂದ ಒಡೆಯ ಶ್ರೀಪುರಂದರವಿಠಲ ಚೆಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು