ಎಲ್ಲಡಗಿದನೊ ಹರಿ, ಎನ್ನಯ ದೊರಿ
ತೋಡಿ ರಾಗ, ಆದಿ ತಾಳ
ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪಲ್ಲವಿ||
ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನ
ಅಲ್ಲಲ್ಲಿ ಪುಸಿಮಾಡಿ ಫುಲ್ಲಲೋಚನ ಕೃಷ್ಣ ||೧||
ಶರಣೆಂದವರ ಕಾಯ್ವ ಕರುಣ ಸಮುದ್ರನು
ಕರುಣವನರಿಯದೆ ಹರಿಣಾಂಕ ನಿಭವ ||೨||
ಕರಿರಾಜನ ಮೊರೆ ಕೇಳಿ ತ್ವರಿತದಿಂದ
ಗರುಡನೇರಿ ಬಂದ ಗರುವರಹಿತ ನಂದಾ ||೩||
ವನಜ ಮಲ್ಲಿಗೆ ಜಾಜಿ ವನದಲ್ಲಿ ಚರಿಸುವ
ವನಿತೆಯರಾಟಕೆ ಮನವೆಚ್ಚಿ ನಡೆದನೊ ||೪||
ವರಾಭಯ ಶಂಖಚಕ್ರವ ಧರಿಸಿದ
ಪರಮ ಸುಂದರಮೂರ್ತಿ ಪರಮೇಷಿ ಜನಕನು ||೫||
ಪವನವಂದಿತ ಪಾದ ಭುವನದೊಳಗೆ ದೇವಾ |
ಕವನ ಮಾಡುವ ಭಾಗವರತಲ್ಲೆ ನಡೆದನೊ ||೬||
ಗಜರಾಜ ಧ್ರುವ ಪಾಂಚಾಲಿ ವರದನೆಂಬೊ
ನಿಜವಾದ ಬಿರುದುಳ್ಳ ವಿಜಯ ವಿಠಲರೇಯಾ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments