ಎಲೆ ಮನವೆ ಹರಿ ಧ್ಯಾನ ಮಾಡು

ಎಲೆ ಮನವೆ ಹರಿ ಧ್ಯಾನ ಮಾಡು

( ರಾಗ ನಾಟ. ಅಟ ತಾಳ) ಎಲೆ ಮನವೆ ಹರಿ ಧ್ಯಾನ ಮಾಡು ||ಪ|| ಎಲೆ ಜಿಹ್ವೆ ಕೇಳು ಕೇಶವನಗುಣಗಳ ನುತಿಸು ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ || ಎಲೆ ನೇತ್ರಗಳಿರ ಶ್ರೀಕೃಷ್ಣಮೂರ್ತಿಯ ನೋಡಿ ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ ತುಲಸಿ ಪರಿಮಳವನಾಘ್ರಾಣಿಸನುದಿನವು || ಎಲೆ ಶಿರವೆ ನೀ ಕೇಳಧೋಕ್ಷಜನ ಸಿರಿಚರಣ ಜಲರುಹದೊಳಳಿಯಂತೆ ಬಿಡದೆ ಓಲಾಡು ಎಲೆ ತನುವೆ ನೀನು ಶ್ರೀಪುರಂದರವಿಟ್ಠಲನ ಸಲೆ ಭಕುತ ಜನರ ಸಂಗತಿಯಲ್ಲಿ ಬಾಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು