ಎನ್ನ ಬಿಟ್ಟು ನೀನಗಲದೆ

ಎನ್ನ ಬಿಟ್ಟು ನೀನಗಲದೆ

( ರಾಗ ಮಂಚಿ. ಛಾಪು ತಾಳ) ಎನ್ನ ಬಿಟ್ಟು ನೀನಗಲದೆ ಶ್ರೀನಿವಾಸ ||ಪ|| ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿ ಮನವೆಂಬೊ ಹಸೆ ಮಂಚ , ಘನವಾದ ಸುಜ್ಞಾನ ದೀಪದ ಬೆಳಕಲ್ಲಿ, ಸನಕಾದಿ ವಂದ್ಯ ನೀ ಬೇಗ ಬಾರೋ || ಪಂಚರಿವರು ಯಾವಾಗಲೂ, ಹೊಂಚ್ಹಾಕಿ ಎನ್ನನು ನೋಡುತಾರೆ ಕೊಂಚಗಾರರು ಆರು ಮಂದಿ ಅವರು, ಹಿಂಚು ಮಿಂಚಿಲ್ಲದೆ ಎಳೆಯುತಾರೆ || ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರು ನೀನೆನ್ನ ಕಾಯೊ ಘನ್ನ ಮಹಿಮ ಶ್ರೀ ಪುರಂದರವಿಠಲ, ಮನ್ನಿಸಿ ಮಮತೆ ಎನ್ನಲಿ ತೋರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು