ಎಚ್ಚರಿಕೆ ಎಚ್ಚರಿಕೆ ಮನವೆ

ಎಚ್ಚರಿಕೆ ಎಚ್ಚರಿಕೆ ಮನವೆ

(ರಾಗ ಸೌರಾಷ್ಟ್ರ ಅಟತಾಳ) ಎಚ್ಚರಿಕೆ ಎಚ್ಚರಿಕೆ ಮನವೆ ಅಚ್ಯುತನ ಪಾದಾರವಿಂದದಲ್ಲಿ ||ಪ|| ಬಲ್ಲಿದನು ನೀನೆಂದು ಬಡವರ ಬಾಯ ಬಡೆಯದಿರೆಚ್ಚರಿಕೆ ಎಳ್ಳಷ್ಟು ತಪ್ಪಿದರೆ ಯಮನಾಳು ನರಕಕ್ಕೆ ಎಳೆದೊಯ್ವರೆಚ್ಚರಿಕೆ || ಮಾಡು ದಾನಧರ್ಮ ಪರರುಪಕಾರವ ಮರೆಯದಿರೆಚ್ಚರಿಕೆ , ಇದು ನೋಡಿ ನಡೆಸುವ ನಿಪುಣರ ನೋಡು ನಟನೆ ಬೇಡೆಚ್ಚರಿಕೆ || ಬಾಳುವಾಗ ಸಿರಿ ಬರುವಾಗ ತಂದೆ ಕೇಳು ಬೆಡಗು ಬೇಡೆಚ್ಚರಿಕೆ ಹಾಳು ಬದುಕಿಗಾಗಿ ಹಗೆಯು ಬೇಡ ನೀ ತಿಳಿದು ನೋಡೆಚ್ಚರಿಕೆ || ಹೆಣ್ಣು ಹೊನ್ನು ಮಣ್ಣು ತನ್ನನೆ ವಂಚಿಸಿ ಹೋಹುದಿನ್ನೆಚ್ಚರಿಕೆ ಅನ್ಯವೆಣಿಸದಿರು ನಂಬಿದ ಠಾವಿಗೆ ಕೆಡುವೆ ನೀನೆಚ್ಚರಿಕೆ || ಚೆನ್ನಾಗಿ ನಾ ಬಾಳಿ ಬದುಕಿದೆನೆಂತೆಂಬ ಶ್ರೇಷ್ಠ ಬೇಡೆಚ್ಚರಿಕೆ, ನೀ ಮುನ್ನ ಮಾಡಿದ ಪುಣ್ಯದಿಂದಲೆ ಬಂದಿತು ಮುಂದಿನ್ನು ಎಚ್ಚರಿಕೆ || ಕಾಲನ ದೂತರು ಯಾವಾಗ ಕರೆವರೊ ಕಾಣಬಾರದೆಚ್ಚರಿಕೆ ಶ್ರೀಲೋಲ ಪುರಂದರವಿಟ್ಠಲರಾಯನ ಮರೆಯದಿರೆಚ್ಚರಿಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು