ಎಂದಪ್ಪಿಕೊಂಬೆ ರಂಗಯ್ಯನ

ಎಂದಪ್ಪಿಕೊಂಬೆ ರಂಗಯ್ಯನ

( ರಾಗ ಭೈರವಿ. ಚಾಪು ತಾಳ) ಎಂದಪ್ಪಿಕೊಂಬೆ ರಂಗಯ್ಯನ, ಎಂದಪ್ಪಿಕೊಂಬೆ ||ಪ|| ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ ಎಂದಿಗೆ ಸವಿ ಮಾತನಾಡಿ ನಾ ತಣಿವೆ ||ಅ|| ಅಂದುಗೆ ಪಾಡಗ ಗೆಜ್ಜೆ ಘಲು ಘಲುರೆಂದು ಚೆಂದಾಗಿ ಕುಣಿವ ಮುಕುಂದನ ಚರಣವ || ಹೊನ್ನುಂಗುರುಡಿದಾರ ಹೊಳೆವ ಪೀತಾಂಬರ ಚೆನ್ನಾಗಿ ನಡುವಿಲಿಟ್ಟ ಜಾಹ್ನವಿಜನಕನ || ಅರಳಲೆ ಮಾಗಾಯಿ ಕೊರಳ ಮುತ್ತಿನ ಹಾರ ತರಳರ ಒಡಗೂಡಿ ಮುರಲಿಯ ಲೋಲನ || ಅಪ್ಪಣ್ಣ ಭಾಗವತನ ರೂಪವು ತಾನಾಗಿ ತುಪ್ಪದ ಬಿಂದಿಗೆ ತಂದ ಸರ್ಪಶಯನನ || ಧರೆಯೊಳು ಸುಜನರ ಪೊರೆಯುತ್ತರಿಲುವನ ಪುರಂದರವಿಠಲನ ಚರಣ ಕಮಲವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು