ಎಂಥಾ ಪಾಪಿ ದೃಷ್ಟಿ ತಾಗಿತು

ಎಂಥಾ ಪಾಪಿ ದೃಷ್ಟಿ ತಾಗಿತು

( ರಾಗ ಆನಂದಭೈರವಿ. ಆದಿ ತಾಳ) ಎಂಥಾ ಪಾಪಿ ದೃಷ್ಟಿ ತಾಗಿತು, ಗೋಪಾಲಕೃಷ್ಣಗೆ ಕೆಟ್ಟ ಪಾಪಿ ದೃಷ್ಟಿ ತಾಗಿತು || ಶಿಶು ಹಸಿದನೆಂದು ಗೋಪಿ ಮೊಸರು ಕುಡಿಸುತ್ತಿರಲು ನೋಡಿ ಹಸಿದ ಬಾಲರ ದೃಷ್ಟಿ ತಾಗಿ ಮೊಸರು ಕುಡಿಯಲೊಲ್ಲನೆ || ಕೃಷ್ಣ ಹಸಿದನೆಂದು ಗೋಪಿ ಬಟ್ಟಲೊಳಗೆ ಕ್ಷೀರ ಕೊಡಲು ಕೆಟ್ಟ ಬಾಲರ ದೃಷ್ಟಿ ತಾಗಿ ಕೊಟ್ಟ ಹಾಲು ಮುಟ್ಟನೆ || ಚಿಣ್ಣ ಹಸಿದನೆಂದು ಗೋಪಿ ಬೆಣ್ಣೆ ಕೈಯಲಿ ಕೊಡಲು ನೋಡಿ ಸಣ್ಣ ಬಾಲರ ದೃಷ್ಟಿ ತಾಗಿ ಬೆಣ್ಣೆ ವಿಷಮವಾಯಿತೆ || ಅಂಗಿ ಹಾಕಿ ಉಂಗುರವಿಟ್ಟು ಕಂಗಳಿಗೆ ಕಪ್ಪನಿಟ್ಟು ಅಂಗಳದೊಳು ಆಡೊ ಕೃಷ್ಣಗೆ ಹೆಂಗಳಾ ದೃಷ್ಟಿ ಇದೇನೋ || ಶಲ್ಲೆ ಉಡಿಸಿ ಮಲ್ಲೆ ಮುಡಿಸಿ ಚೆಲ್ವ ಫಣೆಗೆ ತಿಲಕನಿಟ್ಟು ವಲ್ಲಭ ಪುರಂದರವಿಠಲನ ಫುಲ್ಲನೇತ್ರರು ನೋಡಿದರೇನೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು