ಎಂತಹುದೋ ನಿನ್ನ ಭಕುತಿ

ಎಂತಹುದೋ ನಿನ್ನ ಭಕುತಿ

(ರಾಗ ಮಧ್ಯಮಾವತಿ. ತ್ರಿಪುಟ ತಾಳ) ಎಂತಹುದೋ ನಿನ್ನ ಭಕುತಿ ಸಂತತ ನಿನ್ನ ದಾಸರ ಸಂಗ ಸುಖವೆನಗೆ ವ್ರಣವನಾಶಿಪ ಕುರುಡ ನೊಣ ಮೊಸರ ಕಂಡಂತೆ ಧನಿಕರ ಮನೆಗೆ ಕ್ಷಣ ಕ್ಷಣಕೆ ಹೋಗಿ ತನುಬಾಗಿ ತುಟಿಯೊಣಗಿ ಅಣಕ ನುಡಿ ಕೇಳುವ ಕೃ- ಪಣ ಮನಕ್ಕೆಂತಹುದು ನಿನ್ನಯ ಭಕುತಿ ಇಡೆಯಾಡಿ ಮುಖ ಬಾಡಿ ನುಡಿಯಡಗಿ ಬಡವನೆಂ- ದೊಡಲ ತೋರಿಸಿದೆನೋ ಕಡು ದೈನ್ಯದಿ ಒಡೆಯ ನೀನಹುದೆಂದು ಮಡದಿ ಮಕ್ಕಳಿಗೆ ಹೆಸ- ರಿಡುವೆ ಅಡಗಿರುವೆ ಅವರಡಿಗೆ ಎರಗುವನ ಮನಕೆಂತಹುತು ನಿನ್ನಯ ಭಕುತಿ ಹೋಗಿಬಾರೈ ಎಂದಾಚೆಗೆಳೆದರು ತಲೆ- ಬಾಗಿ ನಿಂತೂ ಅಲ್ಲಿ ಮೌನವಾಗಿ ಓಗರಕೆ ಮನೆ ಮನೆಯ ತಪ್ಪದೆ ತಿರುಗುವ ಜೋಗಿಯ ಕೈಯ ಕಟ್ಟೊಡೆದ ಕೋಡಗದ ಮನಕೆಂತಹುದು ನಿನ್ನಯ ಭಕುತಿ ಅನ್ನವನೆ ತೋರೇ ಚಿಟಿಕಿರಿಯೆ ಬಾಲವ ಬೀಸಿ ಕುನ್ನಿ ಸುಳಿದಾಡಿ ಕಾಲ್ಗೆರಗುವ ತೆರದಿ ಹೆಣ್ಣಿನಾಸಗೆ ಬಾಯಿ ಬಿಡುವಾ ಸ್ತ್ರೈಣವಾಡಿದರೆ ಘನ್ನನಯ್ಯ ಮನ್ನಿಸೆಲೊ ಚಿನ್ನ ಬಹು ಕುನ್ನಿ ಮನಕೆಂತಹುದು ನಿನ್ನಯ ಭಕುತಿ ವಟುವಾಗಿ ಬಲಿಯ ದಾನವ ಬೇಡಹೋದೆ ಆ ನಿ- ಕಟ ಕಷ್ಟಗಳನು ನೀನೇ ಬಲ್ಲೆ ಮುಟ್ಟಿದಡೆ ಪರಿಶುದ್ಧ ಫಣಿವರದ ಪುರಂದರ ವಿಠಲ ನಿನ್ನ ದಾಸರ ಸಂಗ ಸುಖ ಎನಗೆ ಎಂತಹುದೊ ನಿನ್ನಯ ಭಕುತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು