ಇವಗೇಕೆ ಪರಿಮಳ ?

ಇವಗೇಕೆ ಪರಿಮಳ ?

ಪಲ್ಲವಿ: ಇವಗೇಕೆ ಪರಿಮಳ ಇವಗೇಕೆ ಶೃಂಗಾರ ? ಅನುಪಲ್ಲವಿ: ನವನೀತ ಚೋರ ನಾರುವ ಗೊಲ್ಲಗೆ ? ಚರಣ: ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ವಾಟ? ತಲೆದೋರುವವಗೇಕೆ ದಟ್ಟ ಪುನುಗು ? ಬಲು ಕೇಶದವಗೇಕೆ ಬಾವನ್ನದಾ ಲೇಪ ? ಸಲೆಕುರೂಪಿನವಗೇಕೆ ಮಂಡೆಸಾದು* ? ತುಲಸಿ ಮಾಲೆಯ ಧರಿಸಿದವಗೇಕೆ ಜವ್ವಾಜಿ ? ಕೊಲೆಗಡುಕಗೇಕೆ ಕುಂಕುಮದ ತಿಲಕ ? ಅಲೆದಾಡುವವಗೇಕೆ ಅಂಗರಾಗದ ಸುಖ ? ಕಳವು ಮಾಡುವವಗೇಕನಂಗ ಸೊಬಗು ? ಪರಸತಿಯ ಬಯಸುವಗೆ ಪನ್ನಗ ಶಯನವೇಕೆ? ಹರಿದಾಡುವನಿಗೇಕೆ ಆದ ಪಗಡಿ** ? ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ ಧರೆಗಧಿಕನಾದನೀ ಪುರಂದರ ವಿಟ್ಠಲ * ನೊಸಲಸಾದು ಎಂಬ ಪಾಠವೂ ಇದೆ. ** ಅಡಪಡವಿಕೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು