ಇದೇವೆ ಪೂಜೆಯು ನೋಡಿ ಹೃದಯದಲಿ ಒಡಗೂಡಿ

ಇದೇವೆ ಪೂಜೆಯು ನೋಡಿ ಹೃದಯದಲಿ ಒಡಗೂಡಿ

(ಭೈರವಿ ರಾಗ ದೀಪಚಂದಿತಾಳ ) ಇದೇವೆ ಪೂಜೆಯು ನೋಡಿ , ಹೃದಯದಲಿ ಒಡಗೂಡಿ ||ಧ್ರುವ || ಮೂರ್ತಿ ಎಂಬುದೇ ಅಮೂರ್ತಿ ನಾಮಸ್ವರೂಪ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ ||೧|| ನಿತ್ಯ ನಿರ್ಗುಣ ನಿರ್ವಿಕಲ್ಪ ಸತ್ಯ ಸದ್ಗುರು ಸ್ವರೂಪ ನಿತ್ಯನಿತ್ಯ ನಿತ್ಯರ್ಥ ಸುದೀಪ ತತ್ವಜ್ಞಾನ ಮನ ಮಂಟಪ ||೨|| ಸ್ವಾನುಭವ ಸ್ವಾದೋದಕ ಜ್ಞಾನಭಾಗೀರಥಿ ಅಭಿಷೇಕ ಮೌನಮೌನ್ಯ ವಸ್ತ್ರಾಮೋಲಿಕಾ ಧ್ಯಾನವೆಂಬುದೇ ಸೇವೆ ಅನೇಕ ||೩|| ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪ ಸದ್ವಾಸನ್ಯಾಯಿತು ಧೂಪಧೀಪ ಸದ್ಭಾವನೆ ನೈವೇದ್ಯಮೋಪ ||೪|| ಫಲತಾಂಬೂಲವೆ ಸದ್ಭಕ್ತಿ ಮೂಲಭಿಭಾವನೆ ಮಂಗಳಾರ್ತಿ ಬಾಲಕ ಮಹಿಪತಿ ನಿಜಪೂಜಿಸ್ಥಿತಿ ಕುಲಕೋಟಿ ಉದ್ಧರಿಸುವ ಗತಿ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು