ಇದೀಗ ಭಕುತಿಯು ಮತ್ತಿದೀಗ ಭಕುತಿಯು

ಇದೀಗ ಭಕುತಿಯು ಮತ್ತಿದೀಗ ಭಕುತಿಯು

(ರಾಗ ದೇಶಿಕತೋಡಿ ರೂಪಕತಾಳ) ಇದೀಗ ಭಕುತಿಯು ಮ- ತ್ತಿದೀಗ ಭಕುತಿಯು ||ಪ|| ಮಧುದ್ವಿಷನ ಪದಕಮಲಕೆ ಮಧುಪನಂತೆ ಮುದದಿ ವಂದಿಪಡೆ ||ಅ|| ಶ್ರೀಕಾಂತಮೂರುತಿ ಬಾಹ್ಯಾಂತರದಿ ಏಕಾಂತದಿ ನಿನಗಾನಂದ ತುಳುಕಾಡಿ ಮುಖವಿಕಾಸದಿ ತನುವ ಮರೆತು ಏಕಭಾವ ಬುದ್ಧಿಲಿ ಕುಣಿವ || ದಂಭವ ಸಾರುವುದತ್ತತ್ತ ಜರಿದು ಕುಂಭಕ ಪೂರಕ ರೇಚಕ ನೀನದು ಅಂಬುಧೀಶ ಪದಾಂಭುಜ ವೀಕ್ಷಿಸಿ ಬಿಂಬವ ಕಾಣುವ ಹಂಬಲ ಹಿಡಿವ || ಕಂಡವರ ಕಾಲಿಗೆ ಕುಮನುಜರಿಗೆ ಮಂಡೆಯ ಬಾಗದೆ ಪರೇಶ ಕೊಟ್ಟಷ್ಟು ಉಂಡು ಸುಜನರ ಕಂಡು ಸುಖಿಸಿ ಪಾ- ಷಂಡ ಸಂಭಾಷಣೆ ಸೋಕದೆ ಬಾಳುವ || ತಪತಾರಿ ಕಂಬುಲಾಂಛನ ಪಿಡಿದು ಗುಪಿತಮಂತ್ರವ ವರಗುರುಗಳ ಉಪದೇಶಕ್ರಮ ಮೀರದೆ ಇತರ ಕಪಟ ಬಿಟ್ಟು ನಲಿದು ಸುಖಿಪ || ಸದ್ಭಕ್ತಿ ಸದ್ಧರ್ಮ ಮಾಡುತ ನೋಡುತ ಸದ್ಗೋಷ್ಠಿ ಸಚ್ಛಾಸ್ತ್ರ ಹೇಳುತ ಕೇಳುತ ದುಗ್ಧಸಮುದ್ರೇಶ ಪುರಂದರವಿಠಲಗೆ ಇದ್ದ ಸಂಪದವ ತಪ್ಪದೆ ಒಪ್ಪಿಪ ||
ದಾಸ ಸಾಹಿತ್ಯ ಪ್ರಕಾರ
ಬರೆದವರು