ಇಂದುಶೇಖರ ಶಿವ ನಂದಿವಾಹನ

ಇಂದುಶೇಖರ ಶಿವ ನಂದಿವಾಹನ

ಇಂದುಶೇಖರ ಶಿವ ನಂದಿವಾಹನ ಶೂಲಿ
ಸ್ಕಂದಗಣಪರ ತಾತ ದಂದಶೂಕಕಲಾಪ
ಮಂದಾಕಿನೀಧರ ಪುರಂದರಮುಖಸುರ-
ವೃಂದವಿನುತಪಾದದಿಂದ ಶೋಭಿತ ದೇವ
ಕಂದುಕಂಧರ ತ್ರಿಪುರಸಂದೋಹಹರ ಹರ
ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು
ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ
ಬಂದೆನ್ನ ಮನೋರಥ ಇಂದು ಪೂರ್ತಿ ಸೋ ಗುರೋ
ಗಂಧವಾಹನತನಯ ಇಂದಿರಾಪತಿ ಗುರುಜಗನ್ನಾಥವಿಠಲಾ -
ನಂದಬಡುವನಿದಕೆ  ಸಂದೇಹ ಇನಿತಿಲ್ಲ
 
---ಜಗನ್ನಾಥದಾಸರು

ದಾಸ ಸಾಹಿತ್ಯ ಪ್ರಕಾರ
ಬರೆದವರು