ಆರ ಹಾರೈಸಿದರೇನುಂಟು

ಆರ ಹಾರೈಸಿದರೇನುಂಟು

(ರಾಗ ಮಧ್ಯಮಾವತಿ. ಆದಿ ತಾಳ.) ಆರ ಹಾರೈಸಿದರೇನುಂಟು, ಬರೆ ನೀರ ಕಡೆದರಲ್ಲೇನುಂಟು ಅಂತರವರಿಯದ ಅಧಮನ ಬಾಗಿಲ ನಿಂತು ಕಾಯ್ದರಲ್ಲೇನುಂಟು ಇಂತೆರದಲ್ಲಿಯು ಬಳಲಿಸಿ ತಾ ಯಮ- ನಂತೆ ಕೊಲುವನಲ್ಲೇನುಂಟು ಕೊಟ್ಟುದ ಕೊಂಡುದ ಹೇಳನ ಮಾಡೋ ಕ- ನಿಷ್ಠನ ಸೇರಿದರೇನುಂಟು ಬಿಟ್ಟಿಯ ಮಾಡಿಸಿ ಬೆದರಿಸಿ ಬಿಡುವನ ಪಟ್ಟಣ ಸೇರಿದರೇನುಂಟು ಪಿಸುಣನ ಕುದುರೆಯ ಮುಂದೋಡಲು ಬರೆ ಬಿಸಿಲ್ಹಣ್ಣಲ್ಲದಲೇನುಂಟು ವಸುಧೆಯೊಳಗೆ ಸಿರಿ ಪುರಂದರ ವಿಠಲನೆಂ- ದುಸಿರಲು ಮುಕುತಿಯ ಫಲವುಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು