ಆರೋಗಣೆಯ ಮಾಡೇಳಯ್ಯ

ಆರೋಗಣೆಯ ಮಾಡೇಳಯ್ಯ

( ರಾಗ ಮುಖಾರಿ ಝಂಪೆ ತಾಳ) ಆರೋಗಣೆಯ ಮಾಡೇಳಯ್ಯ ||ಪ|| ಸರಸಿಜ ಭವಾಂಡದೊಳ್ ಮೇರು ಮಂಟಪದಿ ಸುರದಿನಕರಾದೀಪ್ತಾಜ್ಯೋತಿಶ್ಚಕ್ರಾ ತರಣಿ ಮಂಡಲವ ಪೋಲುವ ರತುನದ ಹೊನ್ನ ಹರಿವಾಣದಲಿ ದೇವಿ ಬಡಿಸಿದಳಯ್ಯ ಅಲ್ಲ ಹೇರ್‍ಅಳೆ ಲಿಂಬೆ ಮೆಣಸು ಯಾಲಕ್ಕಿಕಾಯಿ ನೆಲ್ಲಿಯಂಬಟೆ ಕಾಯಿ ಚೆಲುವ ಮಾಗಾಯಿ ಬಿಲ್ವ ಮಂಗ್ರುಳಿ ಸೊಂಡೆ ಚೆಲುವ ಪಾಪಟೆಕಾಯಿ ಎಲ್ಲಾ ಧರಾದೇವಿ ತಾ ಬಡಿಸಿದಳಯ್ಯ ಹಪ್ಪಳ ಸೆಂಡಿಗೆ ವಿವಿಧ ಶಾಕಂಗಳು ತುಪ್ಪ ಸಕ್ಕರೆ ಹಣ್ಣು ಫಲಗಳು ಕರ್ಪೂರ ಕಸ್ತೂರಿ ಬೆರಸಿದ ರಸಾಯನವ ಒಪ್ಪಿಸಿ ಶ್ರೀದೇವಿ ಬಡಿಸಿದಳಯ್ಯ ಎಣ್ಣೋರಿಗತಿರಸ ಬೆಲ್ಲ ಮಂಡಿಗೆಯ ಅನ್ನ ಪಾಲಿನ ಪರಮಾನ್ನಗಳು ಸಣ್ಣ ಶಾವಿಗೆಯು ಶಾಲ್ಯಾನ್ನವನು ನಿಮಿಷದೊಳ್ ಬಣ್ಣಿಸಿ ದುರ್ಗಾದೇವಿ ಬಡಿಸಿದಳಯ್ಯ ನೀ ನಿತ್ಯ ತೃಪ್ತನಹುದು ನಿನ್ನುದರದೊಳ್ ನಾನಾ ಜನರು ಬಂದು ಉಣ್ಣ ಬೇಕು ಶ್ರೀನಾಥ ಗದುಗಿನ ವೀರನಾರಾಯಣ ಅನಾಥ ಬಂಧುವೆ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು