ಆರೇನು ಮಾಡುವರು ಅವನಿಯೊಳಗೆ

ಆರೇನು ಮಾಡುವರು ಅವನಿಯೊಳಗೆ

(ರಾಗ ಕಾಂಭೋಜ ಝಂಪೆತಾಳ ) ಆರೇನು ಮಾಡುವರು ಅವನಿಯೊಳಗೆ ||ಪ|| ಪೂರ್ವ ಜನ್ಮದ ಕರ್ಮ ಹಣೆಯಲಿ ಬರೆದುದಕೆ ||ಅ|| ಮಾಡಿದಾಡುಗೆಯು ಕೆಡಲು , ಮನೆಯ ಗಂಡಸು ಬಿಡಲು ಕೂಡಿದ್ದ ಸತಿ ತಾನು ಕುಣಿಸ್ಯಾಡಲು ಗೋಡೆಗೆ ಬರೆದ ಹುಲಿ ಘುಡುಘುಡಿಸಿ ತಿನಬರಲು ಆಡದ ಮಾತುಗಳು ಅಖಿಳರೂ ನಿಜವೆನಲು || ಹೊಲ ಬೇಲಿ ಮೆದ್ದರೆ , ಮೊಲವೆದ್ದು ಇರಿದರೆ ತಲೆಗೆ ತನ್ನ ಕೈಪೆಟ್ಟು ತಾಗಿದರೆ ಹೆಳಲು ಹಾವಾದರೆ , ಗೆಳೆಯ ರಿಪುವಾದರೆ ಕಲೆಸಿಟ್ಟ ಅವಲಕ್ಕಿ ಕಲಪರಟಿ ನುಂಗಿದರೆ || ಹೆತ್ತ ತಾಯಿ ಮಕ್ಕಳಿಗೆ ಹಿಡಿದು ವಿಷ ಹಾಕಿದರೆ ಮತ್ತೆ ತಂದೆಯು ಹೊರಗೆ ಮಾರಿದರೆ ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ ಕತ್ತಲೆಯು ಬೆನ್ನಟ್ಟಿ ಕರಡ್ಯಾಗಿ ಕಚ್ಚಿದರೆ || ಕಣ್ಣಿನೊಳಗಿನ ಬೊಂಬೆ ಕಚ್ಚಾಡಬಂದರೆ ಹೆಣ್ಣಿನ ಹೋರಾಟ ಹೆಚ್ಚಾದರೆ ಅನ್ನ ಉಣದೆ ಬಹಳ ಅಜೀರ್ಣವಾದರೆ ಪುಣ್ಯತೀರ್ಥಗಳಲ್ಲಿ ಪಾಪ ಘಟಿಸಿದರೆ || ಏರಿ ಕುಳಿತ ಬೊಂಬೆ ಎರಡಾಗಿ ಮುರಿದರೆ ಮೇರೆ ತಪ್ಪಿ ವಿಧಿಯು ಮೀರಿದರೆ ಆರಿದ್ದ ಇದ್ದಲಿಯು ಅಗ್ನಿಯಾಗುರಿದರೆ ಧೀರ ಪುರಂದರವಿಠಲ ನಿನ್ನ ದಯ ತಪ್ಪಿದರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು