ಅಭಿಮಾನವೇಕೆ ಸ್ತ್ರೀಯರಲ್ಲಿ

ಅಭಿಮಾನವೇಕೆ ಸ್ತ್ರೀಯರಲ್ಲಿ

( ರಾಗ ಕೇದಾರಗೌಳ. ಮಟ್ಟೆ ತಾಳ) ಅಭಿಮಾನವೇಕೆ ಸ್ತ್ರೀಯರಲ್ಲಿ ||ಪ|| ಭಂಡತನ ಮಾಡೋರು ತುಂಡು ಮುಂಡೇರು ||ಅ|| ಒಡೆತನ ಬರುವಾಗ ತನ್ನ ಪತಿಯನು ಕಂಡು ಚೆಲುವ ಚೆನ್ನಿಗನೆಂದು ಪೊಗಳುವರೊ ಬಡತನವು ಬಂದು ತಾ ಕಾಡುವಾ ವೇಳೆಯಲಿ ಮುದಿಯನ ಕೈ ಪಿಡಿದು ಕೆಟ್ಟನೆಂಬೋರೊ || ಅರುಣ ಉದಯದಲೆದ್ದು ಮನೆ ಮನೆಗಳನೆ ತಿರುಗಿ ಮನದಲ್ಲಿ ಮನೆವಾರ್ತೆ ಸೃಜಿಸುವರೊ ಎದೆಯ ಮೇಲಿನ ಸೆರಗು ಕಡಿವಾಣದಂತ್ಹಾಕಿ ದುಡುಕುತನ ಮಾಡೋರು ತುರುಕ ಮುಂಡೇರು || ಈ ಮನೆಯ ಜಗಳವನು ಆ ಮನೆಗೆ ಪೇಳಿ ಆ ಮನೆಯ ಜಗಳವನು ಈ ಮನೆಗೆ ತಂದು ಅವರಿವರು ಹೊಡೆದಾಡಿ ಕಾದುತಿಹ ವೇಳೆಯಲಿ ಅರಿಯದಂತಿಹರು ಅಲ್ಪ ಮುಂಡೇರು || ಉದಯಕಾಲದಲೆದ್ದು ಹರಿಯ ಸ್ಮರಣೆಯ ಮಾಡಿ ಪರಲೋಕ ಸಾಧನವ ಪಡೆದುಕೊಳ್ಳಿರೆ ಪರಮ ಪುರುಷ ನಮ್ಮ ಪುರಂದರವಿಠಲನ್ನ ಮರೆಯದೆ ಭಜಿಸಿರೆ ಮೂಢ ಮುಂಡೇರಾ||
ದಾಸ ಸಾಹಿತ್ಯ ಪ್ರಕಾರ
ಬರೆದವರು