ಅಪ್ಪಪ್ಪಾ ನೀ ನೋಡಪ್ಪ

ಅಪ್ಪಪ್ಪಾ ನೀ ನೋಡಪ್ಪ

( ರಾಗ ಭೈರವಿ ಆದಿ ತಾಳ) ಅಪ್ಪಪ್ಪಾ ನೀ ನೋಡಪ್ಪ ಮೈಯೆಲ್ಲವು ಕೇಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ ||ಪ|| ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪ ಕಾನನಗಡ್ಡೆ ಬೇಡಪ್ಪ ಒಪ್ಪರ ಬೇರ ತಿನ್ನಪ್ಪ ತಿನ್ನಪ್ಪ ತಿನ್ನಪ್ಪ ಭಕ್ತಿ ರಸದ ಹಣ್ಣಪ್ಪ ಸಣ್ಣವ ನೀಡುವನಪ್ಪ ತೆರೆದ ಬಾಯ ತೋರಪ್ಪ ತೋರಪ್ಪ ನೀ ತೋರಪ್ಪ ಮುದ್ದು ರೂಪವ ತೋರಪ್ಪ ಇಂದ್ರ ಪದವ ನೀಡಪ್ಪ ಬಲಿಗೆ ಕಾವಲಾಗಪ್ಪ ಆಗಪ್ಪ ಭೃಗು ರಾಮಪ್ಪ ವನಚರನು ಆಗಪ್ಪ ಭಾಗವತ ಭರತನಪ್ಪ ಪಾದುಕೆ ಅವಗೆ ನೀಡಪ್ಪ ನೀಡಪ್ಪ ನೀ ನೀಡಪ್ಪ ಹೆಣ್ಣ ಅವಗೆ ನೀಡಪ್ಪ ಬಡವನಾದರೇನಪ್ಪ ಸೋದರ ಅಳಿಯನು ಬಿಡನಪ್ಪ ಬಿಡನಪ್ಪ ಬಿಡನಪ್ಪ ನಿನ್ನ ಚರಣವ ಬಿಡನಪ್ಪ ಕಡಿವಾಣವ ಪಿಡಿಯಪ್ಪ ಪಾರ್ಥಗೆ ಸಾರಥ್ಯ ಮಾಡಪ್ಪ ಮಾಡಪ್ಪ ನೀ ಮಾಡಪ್ಪ ಮೋಹ ಶಾಸ್ತ್ರವ ಕಲಿಸಪ್ಪ ದಿಟ್ಟ ತೇಜಿಯನೇರಪ್ಪ ತಂದೆ ಪುರಂದರ ವಿಟ್ಟಲಪ್ಪ
ದಾಸ ಸಾಹಿತ್ಯ ಪ್ರಕಾರ
ಬರೆದವರು