ಅನುಗಾಲವು ಚಿಂತೆ ಜೀವಕ್ಕೆ

ಅನುಗಾಲವು ಚಿಂತೆ ಜೀವಕ್ಕೆ

(ರಾಗ ಕಾಪಿ ಅಟತಾಳ) ಅನುಗಾಲವು ಚಿಂತೆ ಜೀವಕ್ಕೆ | ತನ್ನ ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರು ಚಿಂತೆ , ಸತಿಯಿಲ್ಲದ ಚಿಂತೆ ಮತಿಹೀನ ಸತಿಯಾದರು ಚಿಂತೆಯು ಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆ ಮಿತಿಮೇರೆಯಿಲ್ಲದ ಮೋಹದ ಚಿಂತೆಯು || ಮಕ್ಕಳಿಲ್ಲದ ಚಿಂತೆ , ಮಕ್ಕಳಾದರು ಚಿಂತೆ ಒಕ್ಕಾಳು ಹೊನ್ನು ಕೊಡುವ ಚಿಂತೆಯು ಅಕ್ಕರೆಯಿಂದಲೆ ತುರುಗಳ ಕಾಯ್ದರು ಕಕ್ಕುಲತೆಯು ಬಿಟ್ಟು ಹೋಗದ ಚಿಂತೆ || ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆ ಹಿಡಿಹೊನ್ನು ಕೈಯೊಳಾದರು ಚಿಂತೆಯು ಪೊಡವಿಯೊಳಗೆ ನಮ್ಮ ಪುರಂದರವಿಠಲನ ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು