ಅನಘನೆಂದೊಮ್ಮೆ ನೆನೆದ ಮಾನವ
ಅನಘನೆಂದೊಮ್ಮೆ ನೆನೆದ ಮಾನವ ಪಾಪ-
ವನದಿ ದಾಟುವ ಬಹುವೇಗದಿಂದ
ಜನನ ಮರಣ ಭಯವಿನಿತಿಲ್ಲ ಅವನೇ
ಸಜ್ಜನ ಶಿರೋಮಣಿ ಕಾಣೋ ಸರ್ವರೊಳು
ಜನಕ ಜನನಿ ಮೊದಲಾದ ನೂರೊಂದು ಕುಲವ
ಪಾವನ ಮಾಡುವನು ಪ್ರತಿದಿನದಲಿ
ವನಿತಾದಿ ವಿಷಯಂಗಳನುಭವಿಸುತ ತನ್ನ
ಮನೆಯೊಳಿರಲವ ಜೀವನ್ಮುಕ್ತನೋ
ಸನಕಾದಿಮುನಿಗಳ ಮನಕೆ ನಿಲುಕದಿಪ್ಪ
ಘನಮಹಿಮನೇ ಬಂದು ಕುಣಿವ ಮುಂದೆ
ಹನುಮವಂದಿತ ಜಗನ್ನಾಥವಿಠಲರೇಯ
ಅನಿಮಿತ್ತ ಬಂಧು ತಾ ಆವಾವ ಕಾಲದಲ್ಲಿ
--ಜಗನ್ನಾಥದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments