ಅದರಿಂದೇನು ಫಲ ಇದರಿಂದೇನು ಫಲ

ಅದರಿಂದೇನು ಫಲ ಇದರಿಂದೇನು ಫಲ

( ರಾಗ ನಾದನಾಮಕ್ರಿಯ ಆದಿ ತಾಳ) ಅದರಿಂದೇನು ಫಲ ಇದರಿಂದೇನು ಫಲ, ನಮ್ಮ ಪುರಂದರ ವಿಠಲನ ನಾಮವ ನೆನೆಯದೆ ||ಪ|| ಹೃದಯ ಕಮಲವನು ತೊಳೆಯಲಾರದೆ ವ್ಯರ್ಥ ಉದಯಾಸ್ತಮಾನ ನೀರೊಳು ಮುಳುಗುವರು ಅದಗಿಂತ ಸರ್ವದಾ ನೀರೊಳಗಿರುತಿಪ್ಪ ಮುದಿಕಪ್ಪೆ ಮಾಡಿದ ತಪ್ಪೇನಯ್ಯ ಹಲವು ಕಾಲ ಕಲ್ಲು ನೀರೊಳಗಿದ್ದರೇನು ಬಲು ನೆನೆದಮೃತಶಿಲೆಯಾಗುವುದೆ ಕರದಲಿ ಜಪ ಮಾಲೆ ಮಣಿಗಳನೆಣಿಸುತ ಪರನಿಂದೆ ಬಾಯಲಿ ಮಾಡುವರಯ್ಯ ಸ್ನಾನವ ಮಾಡುವರು ಆಸನ ಹಾಕುವರು ಮೌನದಿ ಚಪ್ಪಾಳಿಟ್ಟು ಹಕ್ಕಿ ಬೆದರುವಂತೆ ಕಣ್ಣನು ಮುಚ್ಚುವರು ಮೂಗನ್ನೆ ಹಿಡಿವರು ಚೆನ್ನಾಗಿ ಮನವ ನಿಲ್ಲಿಸಲರಿಯರು ವ್ಯರ್ಥ ನೇಮವನು ತಾಳುವರು ದಾನವ ಮಾಡುವರು ಕಾಮಕ್ರೋಧ ಮದ ಮತ್ಸರ ಬಿಡದೆ ಇಂಥಾ ನಾಯಿ ಕುನ್ನಿಗಳ ಕಂಡೊಳಗಿಟ್ಟುಕೊಂಡರೆ ಕಾಶಿಯಲಿ ಮುಳುಗಿದ ಫಲವೇನಯ್ಯ ಮೂರು ಜೋಡಿ ವನಮಾಲೆಯ ಜೋಗಿಣಿಯ ಕೊರಳೊಳು ಕವಡೆಯ ಸರದಂತೆ ಮೂರಾರು ಪುರಾಣ ತಿರುವಿ ಹಾಕುವರು ಮಾರಪಿತನ ಮನಮುಟ್ಟಿ ಭಜಿಸದೆ ವ್ಯರ್ಥ ಹಸಿವಾಯಿತೇಳು ದೇವರ ತೊಳೆಯೆಂಬರು ಹಸನಾಗಿ ಮನಮುಟ್ಟಿ ಪೂಜಿಸರು ಹೊಸ ಹಾವಿನ ಬುಟ್ಟಿಯಂತೆ ಮುಂದಿಟ್ಟುಕೊಂಡು ವಸುಧೆಯೊಳ್ ಗಾರುಡಿಯಾಟವಾಡುವರು ಪರಧನ ಪರಸತಿ ಪರನಿಂದೆಗಳುಕುತ ತೊರೆಯೊಳು ಮಿಂದರೆ ದುರಿತ ಪೋಗುವುದೆ ಸರುವವ ತೊರೆದು ಹರಿಯ ಧ್ಯಾನ ಮಾಡಲು ವರವ ಕೊಡುವ ನಮ್ಮ ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು