ಕಂಡೆ ನಾ ಕನಸಿನಲಿ

ಕಂಡೆ ನಾ ಕನಸಿನಲಿ

ಪಲ್ಲವಿ: ಕಂಡೆ ನಾ ಕನಸಿನಲಿ ಗೋವಿಂದನ! ಅನುಪಲ್ಲವಿ: ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ ನಂದನ ಕಂದ ಮುಕುಂದನ ಚರಣವ! ಚರಣಗಳು: ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ ಬಂದು ಕಾಳಿಂಗನ ಹೆಡೆಯನೇರಿ ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ - -ನಂದದಿ ಕುಣಿವ ಮುಕುಂದನ ಚರಣವ ಉಟ್ಟ ಪೀತಾಂಬರ ಉಡಿಯ ಕಾಂಚಿಯ ಡಾಮ ತೊಟ್ಟ ಮುತ್ತಿನ ಹಾರ ಕೌಸ್ತುಭವು ಕಟ್ಟಿದ ವೈಜಯಂತಿ ತುಳಸಿ ವನಮಾಲೆ ಇಟ್ಟ ದ್ವಾದಶನಾಮ ನಿಗಮ ಗೋಚರನ ಕಿರು ಬೆರಳಿನ ಮುದ್ರೆ ಉಂಗುರ ಮುಂಗೈಯ ಕರದಲಿ ಕಂಕಣ ನಲಿದೋಳುಗಳ ವರ ಚತುರ್ಭುಜ ಶಂಖ ಚಕ್ರದಿ ಮೆರೆವನ ನಿರತದಿ ಒಪ್ಪುವ ಕರುಣಾಮೂರುತಿಯ ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು ಸಣ್ಣ ನಗೆಯ ನುಡಿ ಸವಿಮಾತಿನ ಪುಣ್ಯ ಚರಿತ್ರನ ಪೊಳೆವ ಕಿರೀಟವ ಕಣ್ಣು ಮನ ತಣಿಯದು ಕಂಸಾರಿ ಕೃಷ್ಣನ ಮಂಗಳ ವರ ತುಂಗಭದ್ರದಿ* ಮೆರೆವನ ಅಂಗಜಪಿತ ಶ್ರೀ ಲಕ್ಷ್ಮೀಪತಿಯ ಶೃಂಗಾರಮೂರುತಿ ಪುರಂದರವಿಠಲನ ಕಂಗಳಿಂದಲಿ ಕಂಡೆ ಹಿಂಗಿತು ಭವಭಯ *: ಈ ಹಾಡಿನಲ್ಲಿ ಪುರಂದರ ದಾಸರು ಹಂಪೆಯಲ್ಲಿ ತುಂಗಭದ್ರೆಯ ತೀರದಲ್ಲಿ ಇರುವ ವಿಜಯ ವಿಠಲನನ್ನು ಬಣ್ಣಿಸುತ್ತಿದ್ದಾರೆ ಎಂಬ ಊಹೆಯನ್ನು ಮಾಡಬಹುದು
ದಾಸ ಸಾಹಿತ್ಯ ಪ್ರಕಾರ
ಬರೆದವರು