ಪುರಂದರದಾಸ

Compositions of Purandara dasa

ನಕ್ಷತ್ರಗಳ ಕಂಡ ನರನಿಗೆ

(ಸಂಧ್ಯಾವಂದನೆ) ನಕ್ಷತ್ರಗಳ ಕಂಡ ನರನಿಗೆ ಉತ್ತಮಸಂಧ್ಯಾ ನಕ್ಷತ್ರ ಒಂದೆರಡು ಕಂಡ ನರನಿಗೆ ಮಧ್ಯಮಸಂಧ್ಯಾ ನಕ್ಷತ್ರ ಒಂದನೂ ಕಾಣದ ನರನಿಗೆ ಅಧಮಸಂಧ್ಯಾ ನಕ್ಷತ್ರ ಬಿಟ್ಟರೆ (ನರನನು) ನಾರಾಯಣ ಪುರಂದರವಿಠಲ ಬಿಡುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರೇ ಗೋವಿಂದ ಎಂದೇಳು

(ಪ್ರಾತಃಸ್ಮರಣ) ಹರೇ ಗೋವಿಂದ ಎಂದೇಳು ಹತ್ತವತಾರವ ಪೇಳು ಮೂಡಲದೆಸೆಗೆ ನಡೆ ಗೋವಿಪ್ರತುಳಸಿಗೆ ಎರಗಿ ಬಂದು ನೈರುತ್ಯದಲ್ಲಿ ತೃಣವನಿಟ್ಟು ಶೌಚ ಮಾಡು(/ಮಲಮೂತ್ರಂಗಳ ಬಿಟ್ಟು) ಗುರು ಪರಂಪರೆಯೆಂದು ಪುರಂದರವಿಠಲ ಎನ್ನು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು

(ಪ್ರಾತಃಸ್ಮರಣ) ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು ಚಿತ್ತಜನಯ್ಯನ ಚಿತ್ತದಿ ಧ್ಯಾನಿಸಿ ಅತ್ತ ಉದಯಕ್ಕೆ ಘಳಿಗೆ ಎರಡಿರುವಲ್ಲಿ ನಿತ್ಯ ಸ್ನಾನವ ಮಾಡಿ ಆದಿತ್ಯಗರ್ಘ್ಯವನೀಯೆ ಉತ್ತಮಜನರು ಪೊತ್ತಿದ್ದ ಪಾಪಗಳನೆಲ್ಲ ಉತ್ತರಿಸುವೆನೆಂದಾ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನುಡಿವೆ ಲಿಂಗ ಶೌಚಕ್ಕೊಮ್ಮೆ

(ಮೃತ್ತಿಕಾ ಸ್ನಾನ) ನುಡಿವೆ ಲಿಂಗ ಶೌಚಕ್ಕೊಮ್ಮೆ ಗುದಕ್ಕೆ ಮೂರು ನೆಲ್ಲಿಕಾಯಿಯಷ್ಟು ಮಣ್ಣ ಹಚ್ಚಿ ನೀರೊಳು ತೊಳೆದು ಬಲಗೈಗೆ ಅಯ್ದು ಮಣ್ಣು ಎಡದ ಕೈಗೆ ಏಳು ಮಣ್ಣು ಜೋಡು ಪಾದಕ್ಕೆ ಅಯಿದೈದು ಮಣ್ಣು ಅಯಿದು ಕಡೆಯೊಳಿಟ್ಟು ಪುರಂದರವಿಠಲ ಎನ್ನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಲ ಮೂತ್ರ ಮಾಡುವಾಗ

(ಮಲ ಮೂತ್ರ ವಿಸರ್ಜನ) ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ ಮಲಕೆ ಸಮಾನ ಅದು ಶುದ್ಧವಲ್ಲ ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು ಒಲಿವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಡು ಘಳಿಗೆ ಬೆಳಗು ಇರಲು

(ಸ್ನಾನ) ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪವೇದ ಪರಮಪುಣ್ಯಾತ್ಮ ಬ್ರಾಹ್ಮಣ ಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು

(ಆಚಮನ) ಆಕಳ ಕಿವಿಗೆಣೆ ಅಂಗೈ ಹಳ್ಳವಾಗಿರಬೇಕು ಉದ್ದು ಮುಣುಗುವಂತೆ ಇರಬೇಕು ನೀರು ಸಾಕಾಗದೆ ಹೆಚ್ಚು ಕಡಿಮೆ ಸಾಕೆಂಬಷ್ಟು ಕುಡಿದರೆ ಅದನು ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದವಿಲ್ಲದ ಅಶಕ್ತನಿಗೆ

(ಸ್ನಾನ) ಅಂದವಿಲ್ಲದ ಅಶಕ್ತನಿಗೆ ಒಂದೇ ಅರಿವೆಯಿಂದ ಮೈದೊಳೆದು ಮಡಿವುಟ್ಟು ನಾಮಗಳಿಟ್ಟು ಚಂದದಲಿ ಸಂಧ್ಯಾವಂದನೆ ಮಾಡೆ ಫಲವಾಹುದು ನಿಂದೆ ಹಿಂಗಲೆಂದು ಮಾಡಿದ ಮನುಜಂಗೆ ಇಂದ್ರ ಹದಿನಾಲ್ಕು ಮನುನರಕವೆಂದು ಅಂದು ಪುರಂದರ ವಿಠಲ ಪೇಳಿದನೆಂದು ಸಿದ್ಧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ ( ಶ್ರೀನಿವಾಸದೇವರು ಬೇಟೆಗೆ ಹೋದುದು)

( ರಾಗ ಕಾಂಭೋಜ ಏಕತಾಳ) ಡಂಗುರವ ತೀಡಿ ಮೈಯೊಳು ಗಂಧ ಪೂಸಿದ , ಸ್ವಾಮಿ, ಗಂಧ ಪೂಸಿದ ||೧|| ಪುಣುಗು ಜವ್ವಾಜಿ ಕಸ್ತೂರಿ ಹಚ್ಚಿದ , ಸ್ವಾಮಿ , ಕಸ್ತೂರಿ ಹಚ್ಚಿದ ||೨|| ನೊಸಲ ಮೇಲೆ ಮೃಗನಾಭಿ ತಿಲಕ ಧರಿಸಿದ , ಸ್ವಾಮಿ , ತಿಲಕ ಧರಿಸಿದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆನ್ನ ಎಬ್ಬಿಸಿದೆ

(ರಾಗ ಭೂಪಾಳಿ ಝಂಪೆತಾಳ) ಯಾಕೆನ್ನ ಎಬ್ಬಿಸಿದೆ ಶ್ರೀಹರಿಯ ಸೇವೆ ಧ್ಯಾನದ ಒಳಗಿದ್ದೆನೆ ||ಪ|| ಉದಯಕಾಲಕೆ ಎದ್ದು , ನದಿಯ ತೀರಕೆ ಹೋಗಿ ಮೃತ್ತಿಕೆ ಶೌಚದಿಂದ ಮಲಮೂತ್ರ ಆತ್ಮ ಶುದ್ಧಿಗಳ ಮಾಡಿ ನದಿಯಲಿ ನಿಂತು ಸ್ತೋತ್ರಂಗಳನೆ ಮಾಡಿ ತೀರ್ಥಾಭಿಮಾನಿ ಪ್ರಾರ್ಥನಂಗಳನೆ ಮಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು