ಪುರಂದರದಾಸ

Compositions of Purandara dasa

ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ

ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ, ಗೇಣು ಹೊಟ್ಟೆಗಾಗಿ ಪರರ ಕಷ್ಟಪಡಿಸಲೇಕೊ ಹುಟ್ಟಿಸಿದ ದೇವನು ಹುಲ್ಲು ಮೇಯಿಸುವನಲ್ಲ | ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು ಸೃಷ್ಟಿ ಮಾಡಿದ ದೇವ ಸ್ಥಿತಿ ಮಾಡಲರಿಯನೆ ಘಟ್ಟ್ಯಾಗಿ ಸಲಹುವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನರವೃಂದ ಎಂಬೊ ಕಾನನದಲ್ಲಿ

ನರವೃಂದ ಎಂಬೊ ಕಾನನದಲ್ಲಿ ಶ್ರೀ- ಹರಿನಾಮವೆಂಬಂಥ ಕಲ್ಪವೃಕ್ಷ ಹುಟ್ಟಿತಯ್ಯ ನೆರಳು ಸೇರಲುಂಟು ಫಲವು ಮೆಲ್ಲಲುಂಟು ನಾಲಿಗೆಯಲಿ ನಾಮತ್ರಯಂಗಳುಂಟು ಇದೇ ಮನುಜರ ಮನದ ಕೊನೆಯ ಠಾವು ಇದು ಬ್ರಹ್ಮಾದಿಗಳ ಸದಮಲ ಹೃದಯ ಪೀಠ ಇದೇ ದ್ವಾರಕೆ ಇದೇ ಕ್ಷೀರಾಂಬುಧಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅತ್ತೆ ಅತ್ತೆ ಅತ್ತೆಯೆಂದತ್ತೆ

ಅತ್ತೆ ಅತ್ತೆ ಅತ್ತೆಯೆಂದತ್ತೆ ಅತ್ತೆ ಸತ್ತರೆ ಸೊಸೆ ಅಳುವಂತೆ ಆಯಿತು , ಅತ್ತೆ ಅತ್ತೆ ಸತ್ತರೆ ಸೊಸೆಗೆ ಬುದ್ಧಿಯಾಯಿತು ಅತ್ತೆ ಸತ್ತರೆ ಸೊಸೆಯರಿಗೆದೆಗಿಚ್ಚು ಹೋಯಿತೆಂದು , ಅತ್ತೆ ಪುರಂದರವಿಠಲನ್ನ ಪಾದದಲ್ಲಿ ಭಕ್ತಿಯಿಲ್ಲದವರ ಮುಂದೆ ಪಾಡಿ ನಾನತ್ತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸನಾಗುವುದಕ್ಕೆ ಏಸುಜನ್ಮದ ಸುಕೃತ

ದಾಸನಾಗುವುದಕ್ಕೆ ಏಸುಜನ್ಮದ ಸುಕೃತ ಭಾಸುರ ರವಿಕೋಟಿ ಶ್ರೀಶ ಸುಗುಣವಂತ ನಾಶರಹಿತ ನಿನ್ನ ದಾಸರ ದಾಸ್ಯ ಲೇಸಾಗಿ ಕೊಡು ಕಂಡ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಧ್ಯಾನವ ಕೊಡೊ

ನಿನ್ನ ಧ್ಯಾನವ ಕೊಡೊ , ಎನ್ನ ಧನ್ಯನ ಮಾಡೊ ಪನ್ನಂಗಶಯನ ಶ್ರೀಪುರಂದರವಿಠಲ ||ಪ|| ಅಂಬುಜನಯನನೆ ಅಂಬುಜಜನಕನೆ ಅಂಬುಜನಾಭ ಶ್ರೀಪುರಂದರವಿಠಲ ||೧|| ಪಂಕಜನಯನನೆ ಪಂಕಜಜನಕನೆ ಪಂಕಜನಾಭ ಶ್ರೀಪುರಂದರವಿಠಲ ||೨|| ಭಾಗೀರಥಿಪಿತ ಭಾಗವತರ ಪ್ರಿಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದಿಗಾದರು ನಿನ್ನ ಪಾದಾರವಿಂದವೆ

ಎಂದಿಗಾದರು ನಿನ್ನ ಪಾದಾರ- ವಿಂದವೆ ಗತಿಯೆಂದು ನಂಬಿದೆನೊ || ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು , ಮಂದರಧರ ಗೋವಿಂದ ಪುರಂದರವಿಠಲನೆ ನೀ ಬಂಧು ||೧|| ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆಪನ್ನರಕ್ಷಕನೆ ಪರಿಪಾಲಿಸು ಇನ್ನು ಪನ್ನಂಗಶಯನ ಶ್ರೀ ಪುರಂದರವಿಠಲನೆ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಲದ ಕರ್ಮವ ಆಚರಿಸಿದವ ಕೆಟ್ಟ

ಅಲ್ಲದ ಕರ್ಮವ ಆಚರಿಸಿದವ ಕೆಟ್ಟ ಎಲ್ಲರೊಳಗೆ ವಿರೋಧಿಸಿದವ ಕೆಟ್ಟ ಬಲ್ಲಿದರೊಡನೆ ಸೆಣಸಾಡುವವ ಕೆಟ್ಟ ಲಲ್ಲೆಮಾತಿನ ಸತಿಯ ನಂಬಿದವ ಕೆಟ್ಟ ಪುಲ್ಲನಾಭ ನಮ್ಮ ಪುರಂದರವಿಠಲನ ಮೆಲ್ಲಡಿ ನಂಬದವ ಕೆಟ್ಟ ನರಗೇಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರಿಯ ನೆಚ್ಚವನೆ ಬಿಲ್ಲಾಳು

ಗುರಿಯ ನೆಚ್ಚವನೆ ಬಿಲ್ಲಾಳು ಹರಿಯ ಭಜಿಸಲರಿಯದವನೆ ಮಾಸಾಳು ಹರಿಯೆಂದು ಓದದೆಲ್ಲವು ಹಾಳು ಪುರಂದರವಿಠಲ ಪಾರ್ಥನ ಮನೆಯಾಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದಿನ ದಿನ ಶುಭದಿನ

ಇಂದಿನ ದಿನ ಶುಭದಿನ ಇಂದಿನ ವಾರ ಶುಭವಾರ ಇಂದಿನ ತಾರೆ ಶುಭತಾರೆ ಇಂದಿನ ಕರಣ ಶುಭಕರಣ ಇಂದಿನ ಯೋಗ ಶುಭಯೋಗ ಇಂದಿನ ಲಗ್ನ ಶುಭಲಗ್ನ ಇಂದು ಪುರಂದರವಿಠಲರಾಯನ ಪಾಡಿದ ದಿನವೆ ಶುಭದಿನವು ( /ಸಂದರುಶನ ಫಲವೆಮಗಾಯಿತು)||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ

(ಆಚಮನ) ಹಲವು ಕರ್ಮಗಳಿಗೆ ಹವಣಿ ಎರಡಾಚಮನೆ ಮಲಮೂತ್ರ ವಿಸರ್ಜನಕೆ ಮಾಡು ಮೂರಾಚಮನೆ ನಲಿದುಂಡ ಮೇಲೆ ನಾಲ್ಕಾಚಮನೆ ಲಲನೆಯ ಸಂಗಕ್ಕೆ ಮಾಡು ಅಯಿದಾಚಮನೆ- ಯೆಂದ ಲಕ್ಷ್ಮೀಪತಿ ಪುರಂದರವಿಠಲೇಶ್ವರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು