ಪುರಂದರದಾಸ | ಹರಿದಾಸ ಸಾಹಿತ್ಯ ಸಂಪದ Skip to main content

ಪುರಂದರದಾಸ

Compositions of Purandara dasa

ಗಾಣದೆತ್ತಿನಂತೆ ತಿರುಗಾಡಲಾರೆ

ಗಾಣದೆತ್ತಿನಂತೆ ತಿರುಗಾಡಲಾರೆ

ಬಂಡಿಯ ನೊಗದಂತೆ ಬೀಳಲಾರೆ

ಗಿಳಿಯಂತೆ ನಾ ನಿನ್ನ ಕೂಗಾಡಲಾರೆ

ನವಿಲಿನಂತೆ ನಾ ನಲಿದಾಡಲಾರೆ

ಪುರಂದರವಿಠಲ,  ನೀನೇ ಕರುಣಾಳು ಕಾಯೋ

 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಗಂಡಬಿಟ್ಟ ಗಯ್ಯಾಳಿ ಕಾಣಣ್ಣಗಂಡಬಿಟ್ಟ ಗಯ್ಯಾಳಿ ಕಾಣಣ್ಣ- ಅವಳ

ಕಂಡರೆ ಕಡೆಗಾಗಿ  ತಿರುಗಿಪೋಗಣ್ಣ ||ಪ||ಊರೊಳಗೆ ತಾನು ಪರದೇಶಿಯೆನ್ನುವಳು

ಸಾರುತ ತಿರುಗುವಳು ಮನೆಮನೆಯ

ಕೇರಿಕೇರಿಗುಂಟ ಕೆಲೆಯುತ ತಿರುಗುವಳು

ನಾರಿಯಲ್ಲವೋ ಮುಕ್ಕಮಾರಿ ಕಾಣಣ್ಣ ||೧||ಅತ್ತೆ ಮಾವನ ಕೂಡ ಅತಿಮತ್ಸರವ ಮಾಡಿ

ನೆತ್ತಿಗೆ ಮದ್ದನೆ ಊಡುವಳು

ಸತ್ಯದ ದೇವರ ಸತ್ಯ ನಿಜವಾದರೆ

ಬತ್ತಲೆ ಅಚ್ಚಂಬಿಲೂಡೇನೆಂಬುವಳು ||೨||ಹಲವು ಜನರೊಳು ಕಿವಿಮಾತನಾಡುವಳು

ಹಲವು ಜನರೊಳು ಕಡಿದಾಡುವಳು

ಹಲವು ಜನರೊಳು ಕೂಗಿ ಬೊಬ್ಬೆಯನಿಡುವಳು

ತಳವಾರ ಚಾವಡಿಯಲಿ ಒರಲಿಹಳಣ್ಣ ||೩||

ಪರಪುರುಷರ ಕೂಡಿ ಸರಸವಾಡುತ  ಹೋಗಿ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ

ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ

ಜನ್ಮಜನ್ಮದಿ ರಂಗ ಇಂತ ಲಂಡನು ನೋಡಮ್ಮ ||ಪ||ನೀರಿಗೆ ಹೋಗುವ ನಾರಿಯರನು ಕಂಡು

ಮೋರೆಯ ತಿರುಹಿ ಇದಿರಾಗಿ ನಿಂದು

ದಾರಿಯನಡಗಟ್ಟಿ ನೀರಿಗೆ ಸುಂಕವು

ಊರ ಎಲ್ಲರ ಕೂಡೆ ಭಂಡವ ಮಾಡಿದ ನೋಡಮ್ಮ ||೧||ಪಶುವ ಕರೆಯುತಿಹ ಶಶಿಮುಖಿಯರ ಕಂಡು

ಹಸನಾಗಿಯೆ ಮುಂದೆ ಬಂದು ನಿಂದು

ಹೊಸಪರಿ ವಿಧದಿ ಹೋರಿಯ ಹಾಗೆ ನಿನ್ನ ಮಗ

ಹೊಸಪರಿಯಲಿ  ನಮ್ಮ ಭಂಡು ಮಾಡಿದ ನೋಡಮ್ಮ ||೨||ಗೋಕುಲದೊಳಗುಳ್ಳ ಬೇಕಾದಂಗನೆಯರ

ಕಾಕು ಮಾಡಿದ ಕಾಣೆ ರಂಗ ನಿನ್ನಾಣೆ

ಸಾಕು ಸಾಕು ನಿನ್ನ ಮಗಗೆ ಬುದ್ಧಿಯ ಹೇಳೆ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ


ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ

ಹರಿದಾಸನೆಂದೆನ್ನ ಕರೆವರು ಸಜ್ಜನರು

ಹರಿದಾಸರನು ಯಮನೆಳೆವನೆಂಬಪಕೀರ್ತಿಯ

ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ

 
--ಪುರಂದರದಾಸರು
 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages