ಯಾದವರಾಯ ಬೃಂದಾವನದೊಳು
ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ ||ಪ||
ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇ||ಅನುಪಲ್ಲವಿ||
ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆ||ಚರಣ ೧||
ಅರವಿಂದ ದಳ ನಯನ
ಕರುಗಳ ಸಹಿತಲೇ ಗೋಕುಲವೆಲ್ಲ
ಸಿರಿ ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲ||ಚರಣ ೨||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments