ಆವ ಕಡೆಯಿಂದ ಬಂದೆ

ಆವ ಕಡೆಯಿಂದ ಬಂದೆ

ಆವ ಕಡೆಯಿಂದ ಬಂದೆ ವಾಜಿವದನನೆ ಭಾವಿಸುವ ವಾದಿರಾಜ ಮುನಿಯ ಕಾಣುತ| ಮೇವರೀಸಿ ಮೈವ ತಡವಿ ಸ್ನೇಹದಿಂದಲಿ ಮೇಲು ನೈವೇದ್ಯವನು ಮಿಲಿಯ ಬಂದಿಯಾ| ಮತಿಯ ದೈತ್ಯ ಹೃದಯ ಲೋಭೆ ಮಧ್ವವಲ್ಲಭ ವಲಿಯ ವಾದಿರಾಜ ಮುನಿಗೆ ಸಲಹೋ ಬಂದಿಯಾ| ಇಂತ ಭಕುತಿ ಬೆಲ್ಲಗಡಲೆ ವೈರಾಗ್ಯವ ಹೆತ್ತ ತುಪ್ಪ ಸಕ್ಕರೆಯ ಮಡ್ಡಿಮುದ್ದೆಯಾ| ತುತ್ತು ಮಾಡಿ ನೀಡಿಕೊಡಲು ಮೆಲುದು ಮೆಚ್ಚುತ ಭೃತ್ಸ ವಾದಿರಾಜ ಮುನಿಗೆ ನಿತ್ಯ ಬಂದೆಯಾ| ಸುಲಭ ಸುಮುಖ ಸುಪ್ರಸನ್ನ ಹಯವದನನೇ ಚೆಲುವ ಚಿನ್ಮಯ ಮಾಯ ಕೃಷ್ಣ ನಿನ್ನ ಧ್ಯಾನದಿ| ಫಲವಗೊಂಡ ವಾದಿರಾಜ ಮುನಿಯ ಕಾಣುತ ನಿಖಿಲ ಭಕ್ತಿ ಜ್ಞಾನವನ್ನು ನೀಡ ಬಂದೆಯಾ|
ದಾಸ ಸಾಹಿತ್ಯ ಪ್ರಕಾರ
ಬರೆದವರು