ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಕೆಟ್ಟ ಮೇಲೆ ಬುದ್ಧಿ ಬಂದಿತೀಗ
ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ
ಕೆದ್ದು ಬಿದ್ದೆನು ಬರಿಯ ಗರ್ವದಿಂದ
ಮರುಳಹಂಕಾರದಲಿ ಮಾಯಕ್ಕೆ ಸಿಲುಕಿನ್ನು
ಮರೆತುಬಿಟ್ಟೆನು ನಿನ್ನ ಮಹಿಮೆಯನ್ನು
ಜ್ಞಾನಸುಖ ಪರಿಪೂರ್ಣ ಏನು ಮಾಡಲು ಇನ್ನು
ಶ್ರೀನಿವಾಸನೆ ನಿನ್ನ ದಾಸ ನಾನು
ಸಾರಿದರ ಬಿಡನೆಂಬ ಬಿರುದನುಳುಹೊ
ಆರಿಗಾರಿಲ್ಲ ನೀನಿಲ್ಲದಿನ್ನು
ನೀರಿನೊಳಗದ್ದು ಕ್ಷೀರದೊಳಗದ್ದು
ಭಾರ ನಿನ್ನದು ಕಾಣೊ ಧೀರ ಶ್ರೀಕಾಂತ
--ದಾಸರ ಲಕ್ಷ್ಮೀನಾರಾಯಣರಾಯರು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments