ತನು ನಿನ್ನದು ಜೀವನ ನಿನ್ನದು

ತನು ನಿನ್ನದು ಜೀವನ ನಿನ್ನದು

ತನು ನಿನ್ನದು ಜೀವನ ನಿನ್ನದು ಸ್ವಾಮಿ ಅನುದಿನದಿ ಬಾಹೊ ಸುಖ ದುಃಖ ನಿನ್ನದಯ್ಯ || ೧ || ಸವಿನುಡಿ ವೇದ ಪುರಾಣ ಶಾಸ್ತ್ರಗಳೆಲ್ಲ ಕಿವಿಗೊಟ್ಟು ಕೇಳುವ ಸ್ಥಿತಿ ನಿನ್ನದು ನವಮೋಹನಾಂಗಿಯರ ರೂಪವ ಕಣ್ಣಿಂದ ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ || ೧ || ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲ ಬಿಡದೆ ಲೇಪಿಸಿಕೊಂಬುವುದು ನಿನ್ನದು ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ ಕಡುರುಚಿಗೊಂಬುವ ಆ ಸವಿ ನಿನ್ನದಯ್ಯ || ೨ || ಮಾಯಪಾಶದ ಬಲೆಗೊಳು ಸಿಕ್ಕಿ ತೊಳಲುವ ಕಾಯ ಪಂಚೇದ್ರಿಯದ ಗತಿ ನಿನ್ನದು ಕಾಯಜಪಿತ ಕಾಗಿನೆಲೆಯಾದಿ ಕೇಶವ ರಾಯ ನೀನಲ್ಲದೆ ನರರು ಸ್ವತಂತ್ರರೇ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು